ನವದೆಹಲಿ: ಭಾರತದಲ್ಲಿ ಜನವರಿ 1,2020 ರಲ್ಲಿ ಜನಿಸಿದ ಕಂದಮ್ಮಗಳ ಸಂಖ್ಯೆ ಸುಮಾರು 67,000!
ಯುನಿಸೆಫ್ ಹೊರತಂದ ವರದಿಯಲ್ಲಿ ವಿಚಾರ ಬೆಳಕಿಗೆ ಬಂದಿದ್ದು ಭಾರತದಲ್ಲಿ 67,385 ಪುಟಾಣಿಗಳು ಜನಿಸಿದ್ದಾರೆ. ವಿಶ್ವದಲ್ಲಿ 3,92, 078 ಪುಟಾಣಿಗಳು ಜನಿಸಿರುವ ಲೆಕ್ಕಚಾರ ನೀಡಿದ್ದಾರೆ.
ಇಡೀ ವಿಶ್ವದಲ್ಲೇ ಅತೀ ಹೆಚ್ಚು ಭಾರತದಲ್ಲಿ ಮಕ್ಕಳು ಜನಿಸಿದ್ದು ನಂತರ ಸ್ಥಾನಗಳಲ್ಲಿ ಚೀನಾ (46,299), ನೈಜಿರೀಯಾ (26,039), ಪಾಕಿಸ್ತಾನ (16,787), ಇಂಡೋನೇಷ್ಯಾ (13,020) ಮತ್ತು ಅಮೇರಿಕಾ (10,452) ಕ್ರಮವಾಗಿದೆ.