ಸಿಐಡಿ ತನಿಖೆಗೆ ಒಪ್ಪಿಸಿ ಪ್ರಕರಣ ಮುಚ್ಚಿಹಾಕಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರಯತ್ನಿಸುತ್ತಿದ್ದಾರೆ – ಸಿದ್ದರಾಮಯ್ಯ

ಬೆಂಗಳೂರು :ಸಿದ್ದರಾಮಯ್ಯ ಅವರು “ಮಂಗಳೂರಿನಲ್ಲಿ ಅಹಿತಕರ ಘಟನೆಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡೆ.
ಮಂಗಳೂರಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಬೇಕು ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನತೆ ಶಾಂತರೀತಿಯಿಂದ ವರ್ತಿಸಿ ಎಂದು ಮನವಿ ಮಾಡುತ್ತೇನೆ.

ಸಿಐಡಿ ತನಿಖೆಯಿಂದ ಗೋಲಿಬಾರ್ ಪ್ರಕರಣದ ಹಿಂದಿರುವ ನಿಜವಾದ ಅಪರಾಧಿಗಳು ಹೊರಬರುತ್ತಾರೆ ಎಂಬ ನಂಬಿಕೆ ನನಗಿಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಪೊಲೀಸರ ತಪ್ಪಿಲ್ಲ ಎಂದು ತನಿಖೆಗೆ ಮೊದಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳೇನು ಘಟನೆಯ ಪ್ರತ್ಯಕ್ಷದರ್ಶಿಯೇ?

ಸಿಐಡಿ ತನಿಖೆಗೆ ಒಪ್ಪಿಸಿ ಪ್ರಕರಣ ಮುಚ್ಚಿಹಾಕಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆ. ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರು ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗಬೇಕು ಎಂದಾದರೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ಆಗಲೇಬೇಕು.

ಗಲಭೆಗೆ ಪ್ರಚೋದನೆ ನೀಡಿದ ಅಪರಾಧದ ಮೇಲೆ ಕಲ್ಲಡ್ಕ ಪ್ರಭಾಕರ್ ಅವರ ಮೇಲೂ ಕೇಸ್ ದಾಖಲಿಸಬೇಕು. ಯಾವುದೋ ಒಂದು ವರ್ಗವನ್ನು ಮಾತ್ರ ಗುರಿಯಾಗಿಸಿಕೊಂಡು ಕ್ರಮ‌ ಜರುಗಿಸುವುದು ನ್ಯಾಯಸಮ್ಮತವಲ್ಲ “ಎಂದು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ

ನವದೆಹಲಿ,(ಜ.21): ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ...

ಕವಿ ಚನ್ನವೀರ ಕಣವಿ ಚಿಕಿತ್ಸಾ ವೆಚ್ಚ ಬರಿಸಲಿರುವ ಸರ್ಕಾರ : ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು,(ಜ.20): ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ವನ್ನು ಸರ್ಕಾರದ ವತಿಯಿಂದ ಭರಿಸಲು ನಿರ್ಧರಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಕಣವಿ ಅವರು ಜನವರಿ 14 ರಂದು...

ಮಂಡ್ಯ : ಶೆಲ್ ತಯರಿಕ ಕಂಪನಿಯಲ್ಲಿ 39 ಜನರಿಗೆ ಕೋರೊನ

ಮಂಡ್ಯ (ಜ.21): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶೆಲ್ ತಯಾರಿಕಾ ಫ್ಯಾಕ್ಟರಿಯಲ್ಲಿ 39 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ...
Translate »
error: Content is protected !!