ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದನ್ನೂ ಸ್ವಾಗತಿಸುತ್ತೇನೆ. ಆದರೆ ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ – ಸಿದ್ದರಾಮಯ್ಯ

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮಕ್ಕೆ : ಅಭಾವಿಪ ಆಗ್ರಹಿಸಿ ಮಿನಿ ವಿಧಾನ ಸೌದದ ಎದುರು ಪ್ರತಿಭಟನೆ.

ಶಿಕ್ಷಣ ಕ್ಷೇತ್ರದಲ್ಲಿ ಇಡಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂದು ಹೆಗ್ಗಳಿಕೆ ನಮ್ಮೆಲರಿಗೂ ಇದೆ. ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ...

ಕಾಂಗ್ರೆಸ್ ಬ್ಯಾಂಕ್ ಬೆಳೆಸಿದ್ರೆ, ಬಿಜೆಪಿ ಮುಚ್ಚಿತು; ಅವಿಭಜಿತ ದ.ಕ ಜಿಲ್ಲೆಗೆ ಕಟೀಲ್, ಶೋಭಾ ಅವಮಾನ ಮಾಡಿದ್ರು – ಡಿ.ಕೆ ಶಿವಕುಮಾರ್

ಉಪ್ಪುಂದ : ಕರಾವಳಿ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಸದ್ದು ಮಾಡಿದ ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಬಗ್ಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ಶಿಫಾರಸ್ಸು...

ಬಂಟ್ವಾಳ: ಆರ್ಥಿಕ ಸಂಕಷ್ಟದಲ್ಲಿದ್ದ ಅಜ್ಜಿಗೆ ನೆರವಾದ ಪೊಲೀಸರು

ಬಂಟ್ವಾಳ: ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದ ವಯೋವೃದ್ಧೆಯೋರ್ವರಿಗೆ ನೆರವಾಗುವ ಮೂಲಕ ERSS 112 ಪೊಲೀಸರು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಫೆಬ್ರವರಿ 26ರಂದು ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ERSS 112 ಸೇವೆಯ ಸಿಬ್ಬಂದಿಗಳಾದ ವಿಜಯ್ ಮತ್ತು ವಿಶ್ವನಾಥ್‌ಗೆ...

SSLC ಪರೀಕ್ಷೆ: ಸಿಲೆಬಸ್‌ನಲ್ಲಿ ಶೇ. 30 ಕಡಿತ – ಮಕ್ಕಳಿಗೆ ಹೊರೆಯಾಗದಂತೆ ಕ್ರಮ: ಸಚಿವ ಸುರೇಶ ಕುಮಾರ್

ಮಂಗಳೂರು: ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಸಿಲೆಬಸ್ ಮುಗಿಸಲು ಪ್ರತೀ ಶಾಲೆಗಳಲ್ಲೂ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಲೆಬಸ್‌ನಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಈ ಕುರಿತಂತೆ...

ಚೀನಾ ಆಕ್ರಮಣಕಾರಿ ಧೋರಣೆಯ ವಿರುದ್ಧ ಮೋದಿ ಸರಕಾರ ಮೌನ – ರಾಹುಲ್ ಗಾಂಧಿ ವಾಗ್ದಾಳಿ

ತೂತುಕುಡಿ(ತಮಿಳುನಾಡು): ಚೀನಾ-ಭಾರತದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಪಂಗೊಂಗ್ ಸರೋವರ ಪ್ರದೇಶಗಳ ಉತ್ತರ ಮತ್ತು ದಕ್ಷಿಣ ದಡಗಳಿಂದ...

ಬೆಂಗಳೂರು :ಸಿದ್ದರಾಮಯ್ಯ ಅವರು “ಸ್ವಯಂಪ್ರೇರಿತವಲ್ಲದ ರಾಜೀನಾಮೆ ಹಾಗೂ ವಿಪ್ ಉಲ್ಲಂಘಿಸಿದ್ದಕ್ಕಾಗಿ ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರು 17 ಜನ ಶಾಸಕರನ್ನು ಅನರ್ಹಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಈ ತೀರ್ಪಿನಲ್ಲಿ ಸಭಾಧ್ಯಕ್ಷರ ಆದೇಶವನ್ನು ಸುಪ್ರೀಂ ಕೋರ್ಟ್ ಭಾಗಶಃ ಎತ್ತಿಹಿಡಿದಿದೆ.

ಸಭಾಧ್ಯಕ್ಷರಾಗಿದ್ದ ರಮೇಶ್ ಕುಮಾರ್ ಅವರ ನಿರ್ಣಯದಲ್ಲಿ ಎರಡು ಭಾಗಗಳಿವೆ. ಮೊದಲನೆಯದು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ ಸಂವಿಧಾನದ ನಿಯಮ ಉಲ್ಲಂಘಿದ್ದಕ್ಕಾಗಿ ಅನರ್ಹಗೊಳಿಸಲಾಗಿತ್ತು. ಎರಡನೆಯದು ತಪ್ಪಿತಸ್ಥರೆಂಬ ಕಾರಣಕ್ಕೆ ಈ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅವರ ಮೇಲೆ ನಿರ್ಬಂಧ ಹೇರಲಾಗಿತ್ತು.

ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸಭಾಧ್ಯಕ್ಷರ ನಿರ್ಣಯದ ಮೊದಲ ಭಾಗವನ್ನು ಎತ್ತಿಹಿಡಿಯಲಾಗಿದೆ ಮತ್ತು ಎರಡನೇ ಭಾಗವನ್ನು ಬದಲಾವಣೆಗೊಳಪಡಿಸಿ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಲಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೈತಿಕ ಹೊಣೆಗಾರಿಕೆ ಅತಿ ಮುಖ್ಯವಾದುದ್ದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಒಂದು ಪಕ್ಷದಿಂದ ಗೆದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇನ್ನೊಂದು ಪಕ್ಷ ಸೇರುವುದು ಅನೈತಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆ. ಇದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದನ್ನೂ ಸ್ವಾಗತಿಸುತ್ತೇನೆ. ಆದರೆ ಪಕ್ಷದಿಂದ ಪಕ್ಷಕ್ಕೆ ಹಾರುವವರನ್ನು ಜನರು ಸಹಿಸಲ್ಲ, ಅವರನ್ನು ಖಂಡಿತಾ ಸೋಲಿಸುತ್ತಾರೆ.
ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷಾಂತರಿಗಳು ಸೋತಿದ್ದಾರೆ, ಅದೇ ಫಲಿತಾಂಶ ಕರ್ನಾಟಕದಲ್ಲಿಯೂ ಮರುಕಳಿಸುತ್ತದೆ.

ಮೇಲ್ನೋಟಕ್ಕೆ ಅನರ್ಹ ಶಾಸಕರ ಉದ್ದೇಶ ಈಡೇರಿದಂತೆ ಕಂಡರೂ, ನೈತಿಕತೆ ಆಧಾರದಲ್ಲಿ ಇದು ಅವರಿಗೆ ಅತಿ ದೊಡ್ಡ ಹಿನ್ನಡೆ. ಸಂವಿಧಾನದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಶಾಸಕರು ಅನರ್ಹರಾಗುವುದು ಅವರ ನೈತಿಕತೆಯ ಸೋಲು. ಇದನ್ನು ಜನರು ಗಮನಿಸಿದ್ದರೆ ಮತ್ತು ಮುಂದಿನ‌ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಎಂದು ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ

LEAVE A REPLY

Please enter your comment!
Please enter your name here

Hot Topics

ವೈದ್ಯಕೀಯ ಸೀಟುಗಳ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದವರ ವಿರುದ್ಧ ಕಠಿಣ ಕ್ರಮಕ್ಕೆ : ಅಭಾವಿಪ ಆಗ್ರಹಿಸಿ ಮಿನಿ ವಿಧಾನ ಸೌದದ ಎದುರು ಪ್ರತಿಭಟನೆ.

ಶಿಕ್ಷಣ ಕ್ಷೇತ್ರದಲ್ಲಿ ಇಡಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಕರ್ನಾಟಕ ಎಂದು ಹೆಗ್ಗಳಿಕೆ ನಮ್ಮೆಲರಿಗೂ ಇದೆ. ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ನ್ಯಾಯವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೀಟುಗಳು ದೊರೆಯಲಿ ಎಂಬ ಉದ್ದೇಶದಿಂದ ಸಿಇಟಿ...

ಕಾಂಗ್ರೆಸ್ ಬ್ಯಾಂಕ್ ಬೆಳೆಸಿದ್ರೆ, ಬಿಜೆಪಿ ಮುಚ್ಚಿತು; ಅವಿಭಜಿತ ದ.ಕ ಜಿಲ್ಲೆಗೆ ಕಟೀಲ್, ಶೋಭಾ ಅವಮಾನ ಮಾಡಿದ್ರು – ಡಿ.ಕೆ ಶಿವಕುಮಾರ್

ಉಪ್ಪುಂದ : ಕರಾವಳಿ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಸದ್ದು ಮಾಡಿದ ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಬಗ್ಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ಶಿಫಾರಸ್ಸು...

ಬಂಟ್ವಾಳ: ಆರ್ಥಿಕ ಸಂಕಷ್ಟದಲ್ಲಿದ್ದ ಅಜ್ಜಿಗೆ ನೆರವಾದ ಪೊಲೀಸರು

ಬಂಟ್ವಾಳ: ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದ ವಯೋವೃದ್ಧೆಯೋರ್ವರಿಗೆ ನೆರವಾಗುವ ಮೂಲಕ ERSS 112 ಪೊಲೀಸರು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಫೆಬ್ರವರಿ 26ರಂದು ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ERSS 112 ಸೇವೆಯ ಸಿಬ್ಬಂದಿಗಳಾದ ವಿಜಯ್ ಮತ್ತು ವಿಶ್ವನಾಥ್‌ಗೆ...

Related Articles

ಕಾಂಗ್ರೆಸ್ ಬ್ಯಾಂಕ್ ಬೆಳೆಸಿದ್ರೆ, ಬಿಜೆಪಿ ಮುಚ್ಚಿತು; ಅವಿಭಜಿತ ದ.ಕ ಜಿಲ್ಲೆಗೆ ಕಟೀಲ್, ಶೋಭಾ ಅವಮಾನ ಮಾಡಿದ್ರು – ಡಿ.ಕೆ ಶಿವಕುಮಾರ್

ಉಪ್ಪುಂದ : ಕರಾವಳಿ ಭಾಗದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಸದ್ದು ಮಾಡಿದ ಹೊನ್ನಾವರದ ಪರೇಶ ಮೇಸ್ತ ಅನುಮಾನಾಸ್ಪದ ಸಾವಿನ ಬಗ್ಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಸಿಬಿಐಗೆ ಶಿಫಾರಸ್ಸು...

SSLC ಪರೀಕ್ಷೆ: ಸಿಲೆಬಸ್‌ನಲ್ಲಿ ಶೇ. 30 ಕಡಿತ – ಮಕ್ಕಳಿಗೆ ಹೊರೆಯಾಗದಂತೆ ಕ್ರಮ: ಸಚಿವ ಸುರೇಶ ಕುಮಾರ್

ಮಂಗಳೂರು: ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಸಿಲೆಬಸ್ ಮುಗಿಸಲು ಪ್ರತೀ ಶಾಲೆಗಳಲ್ಲೂ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಿಲೆಬಸ್‌ನಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಮಂಗಳೂರಿನಲ್ಲಿ ಈ ಕುರಿತಂತೆ...

ಚೀನಾ ಆಕ್ರಮಣಕಾರಿ ಧೋರಣೆಯ ವಿರುದ್ಧ ಮೋದಿ ಸರಕಾರ ಮೌನ – ರಾಹುಲ್ ಗಾಂಧಿ ವಾಗ್ದಾಳಿ

ತೂತುಕುಡಿ(ತಮಿಳುನಾಡು): ಚೀನಾ-ಭಾರತದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಪಂಗೊಂಗ್ ಸರೋವರ ಪ್ರದೇಶಗಳ ಉತ್ತರ ಮತ್ತು ದಕ್ಷಿಣ ದಡಗಳಿಂದ...
Translate »
error: Content is protected !!