ನಮ್ಮ ಕುರಿತು:

ಕೋಸ್ಟಲ್‌ ಮಿರರ್‌ ಅಂತರ್ಜಾಲ ಮಾಧ್ಯಮವನ್ನು 2016 ರಲ್ಲಿ ಪ್ರಾರಂಭಿಸಲಾಯಿತು. ಈ ಅಂತರ್ಜಾಲ ಮಾಧ್ಯಮವನ್ನು ಯುವ ಪತ್ರಕರ್ತರ ತಂಡ ಕಟ್ಟಿ ಬೆಳೆಸಿದ್ದು, ಸಮಾಜದಲ್ಲಿ ದನಿಯಿಲ್ಲದವರ ಪರವಾಗಿ ಧ್ವನಿಯಾಗುವ ಕೆಲಸವನ್ನು ಅತ್ಯಂತ ಪ್ರಮಾಣಿಕವಾಗಿ ನಡೆಸಿಕೊಂಡು ಬಂದಿರುತ್ತದೆ.

ಇದರ ಮುಖ್ಯ ಕಚೇರಿಯು ಉಡುಪಿ ಜಿಲ್ಲೆಯಲ್ಲಿದ್ದು, ಕರಾವಳಿ ಕರ್ನಾಟಕದ ಸುದ್ದಿಯೊಂದಿಗೆ ರಾಜ್ಯ,ರಾಷ್ಟ್ರೀಯ,ಅಂತರಾಷ್ಟ್ರೀಯ ಸುದ್ದಿಗಳನ್ನು ಪ್ರಕಟಿಸಲಾಗುತ್ತಿದೆ. ಮಿರರ್‌ ಫೋಕಸ್‌ ಎಂಬ ವಿಶೇಷ ವರದಿಗಳೊಂದಿಗೆ ಜನರಿಗೆ ತೆರೆಮರೆಯ ಸತ್ಯವನ್ನು ತೋರಿಸುವ ಪ್ರಯತ್ನ ಕೂಡ ನಡೆಸಲಾಗುತ್ತಿದೆ.

ಪ್ರತಿ ನಿತ್ಯ ಲಕ್ಷಾಂತರ ಓದುಗರನ್ನು ಹೊಂದಿರುವ ಕೋಸ್ಟಲ್‌ ಮಿರರ್‌ ಸುದ್ದಿ ಮಾಧ್ಯಮಕ್ಕೆ ವಿದೇಶದಲ್ಲೂ ಓದುಗರಿದ್ದು, ಮುಖ್ಯವಾಗಿ ಸೌದಿ ಅರೇಬಿಯಾ, ಯು.ಎ.ಈ, ಬಹರೈನ್‌, ಕುವೈತ್‌, ಯು.ಎಸ್‌ ನಲ್ಲೂ ಸುದ್ದಿಗಳನ್ನು ಕನ್ನಡಿಗರು ಓದುತ್ತಾರೆಂಬುವುದು ಕೋಸ್ಟಲ್‌ ಮಿರರ್‌ʼಗೆ ಸಂತೋಷದ ವಿಚಾರ.
ಸಂಪಾದಕೀಯ, ಅಂಕಣ, ವಿಶೇಷ ವರದಿಗಳ ಮುಖಾಂತರ ಓದುಗರಿಗೆ ವಿಚಾರಗಳನ್ನು ತಲುಪಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಯುವಜನರಲ್ಲಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸುವಲ್ಲೂ ಮುಂಚೂಣಿಯಲ್ಲಿದ್ದು ವಿಶೇಷತವಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಇದರ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಪೊಲೀಸ್‌ ಇಲಾಖೆ, ಶಿಕ್ಷಣ ಇಲಾಖೆಗಳೊಂದಿಗೆ ಕೂಡಿಕೊಂಡು ನಡೆಸಿಕೊಂಡು ಬರುತ್ತಿದೆ. ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ನಮ್ಮ ಯುವ ಪತ್ರಕರ್ತರು ಮತ್ತು ಕೋಸ್ಟಲ್‌ ಮಿರರ್‌ ತಂಡ ಎನ್.ಜಿ.ಓಗಳೊಂದಿಗೆ ಕೂಡಿಕೊಂಡು ಪರಿಹಾರೋಪಾಯ ಕಾರ್ಯಗಳಲ್ಲೂ ತೊಡಗಿಸಿಕೊಂಡು ಸಾಮಾಜಿಕ ಬದ್ದತೆಯನ್ನು ಸಾಕ್ಷಾತ್ಕರಿಸಿದೆ.

2019 ರಲ್ಲಿ ನವದೆಹಲಿಯಲ್ಲಿ ನಡೆದ “Media Amelioration” ಕಾರ್ಯಕ್ರಮದಲ್ಲಿ ಕೋಸ್ಟಲ್‌ ಮಿರರ್‌”ನ ಪುಟ್ಟ ಹೆಜ್ಜೆಯನ್ನು ಗುರುತಿಸಿ “Media Amelioration certificate of appreciation” ನ್ನ ನೀಡಲಾಗಿದೆ.