124 A ದೇಶದ್ರೋಹ vs ಅಭಿವ್ಯಕ್ತಿ ಸ್ವಾತಂತ್ರ್ಯ

ಸೋಮವಾರದಿಂದ ಶಾಲೆ ತೆರೆದರೂ, ಕ್ಲಾಸ್ ಇಲ್ಲ – ಇಲ್ಲಿದೆ ಡಿಟೈಲ್ಸ್!

ಬೆಂಗಳೂರು: ಸೋಮವಾರದಿಂದ ಶಾಲೆಗಳ ಬಾಗಿಲು ತೆರೆದರೂ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ 9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗೆ ಹೋಗಿ...

ಬೆಳ್ತಂಗಡಿ: ಸ್ಕೂಟರ್ ಕಳವು, ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಜಿರೆ ಗ್ರಾಮದ ಅರುಣ್ ಶೆಟ್ಟಿ,ಹೇಮಂತ್ ಯಾನೆ ಹರ್ಷಿತ್,ಸಂಪತ್...

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...

ಫೋನ್ ಟ್ರೇಡರ್ಸ್: OPPO F17 ಬುಕ್ ಮಾಡಿ ಆಕರ್ಷಕ ಉಡುಗೊರೆ ಗೆಲ್ಲಿ!

ಸಂತೆಕಟ್ಟೆ: ಜನಪ್ರಿಯ ಒಪ್ಪೊ ಸಂಸ್ಥೆ ವಿನೂತನ ಮಾದರಿಯ ಮತ್ತು ತಂತ್ರಜ್ಞಾನ ಒಳಗೊಂಡ OPPO f17 ಮೊಬೈಲ್'ನ್ನು ಹೊರ ತಂದಿದೆ. ಸಂತೆಕಟ್ಟೆಯಲ್ಲಿರುವ ಖ್ಯಾತ ಮೊಬೈಲ್ ಶಾಪ್ ಫೋನ್ ಟ್ರೇಡರ್ಸ್' ನಲ್ಲಿ ಪ್ರಿ ಬುಕ್ ಮಾಡಿ ಆಕರ್ಷಕ...

ಕೃಷಿ ಮಸೂದೆಯ ಬಗ್ಗೆ ಸುಳ್ಳು ಹಬ್ಬಿಸಬೇಡಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು...

ಸಂಪಾದಕೀಯ

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧದ ಪ್ರತಿಭಟನೆ ಸರಕಾರಗಳನ್ನು ಅಲ್ಲಾಡಿಸಿರುವುದು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರವರ ಹೇಳಿಕೆಗಳು ಸ್ಪಷ್ಟ ಪಡಿಸುತ್ತಿದೆ. ದೆಹಲಿಯಲ್ಲಿ ಇದೀಗ ವಿಧಾನ ಸಭಾ ಚುನಾವಣೆಗೆ ದಿನಗಳು ಹತ್ತಿರವಾಗಿದ್ದು ಅಭಿವೃದ್ಧಿ ಕೆಲಸದಿಂದ ಜನರ ಮತ ಸೆಳೆಯಲು ಯೋಗ್ಯತೆಯಿಲ್ಲದ ಬಿಜೆಪಿ ಸರಕಾರ, ತನ್ನ ಪ್ರತಿ ರ಼್ಯಾಲಿಯಲ್ಲೂ ಶಾಹಿನ್ ಬಾಗ್ ಪ್ರತಿಭಟನಕಾರರ ಬಗ್ಗೆ ಇಲ್ಲಸಲ್ಲದ ಸುಳ್ಳಾರೋಪ ಹಾಕಿ ಜನರನ್ನು ಮತ್ತೆ ಧರ್ಮದ ಹೆಸರಿನಲ್ಲಿ ಒಡೆದು ಮತ ಸೆಳೆಯಲು ಪ್ರಯತ್ನಿಸುತ್ತಿದೆ.

ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಜನ ಪ್ರತಿನಿಧಿಯೊಬ್ಬ ಸೇವಕನಾಗಿರುತ್ತಾನೆ. ಆತ ತಪ್ಪು ಮಾಡಿದಾಗ ಅದನ್ನು ತಿದ್ದಿ ಸರಿ ಪಡಿಸುವುದು ಪ್ರಜಾಪ್ರಭುತ್ವ ದೇಶದ ಜೀವಂತಿಕೆಯ ಲಕ್ಷಣ. ಆದರೆ ಪ್ರಸ್ತುತ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ ಎಂಬ ಮಟ್ಟಿಗೆ ಆತಂಕ ಸೃಷ್ಟಿಯಾಗಿದೆ. ಈ ದೇಶದ ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಗೆ, ಮತ್ತೆ ಜನರು‌ ಈ ದೇಶವನ್ನು ಸರ್ವಾಧಿಕಾರಿಗಳ ಕೈಯಿಂದ ರಕ್ಷಿಸಲು ಅಂದೋಲನ ನಡೆಸುತ್ತಿದ್ದಾರೆನೋ ಎಂಬುವಷ್ಟರ ಮಟ್ಟಿಗೆ ಬೆಳವಣಿಗೆಗಳು ನಡೆಯುತ್ತಿವೆ.

ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಸರಕಾರ ಜನವಿರೋಧಿ ನೀತಿಗಳನ್ನು ತಂದಾಗ, ಸಂವಿಧಾನ ಬಾಹಿರವಾದ ಕಾನೂನುಗಳನ್ನು ಜಾರಿಗೆ ತಂದಾಗ ಅದರ ವಿರುದ್ಧ ಮಾತನಾಡುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ.‌ಆದರೆ ಪ್ರಸಕ್ತ ಬಿಜೆಪಿ ಸರಕಾರ ತನ್ನ ಸರಕಾರದ ಕರಾಳ ಕಾನೂನಿನ ಬಗ್ಗೆ, ನೀತಿಯ ಬಗ್ಗೆ ಪ್ರಶ್ನಿಸಿದವರನ್ನು ಬೇರೆ ಬೇರೆ ಕಾರಣಕೊಟ್ಟು ‘ದೇಶದ್ರೋಹ’ ದ ಪ್ರಕರಣ ದಾಖಲಿಸಿ ಬಾಯಿ ಮುಚ್ಚಿಸುವ ಯತ್ನ ನಡೆಸುತ್ತಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರನ್ನು ದಂಗೆಕೋರರಂತೆ ಚಿತ್ರಿಸಲಾಗುತ್ತಿದೆ. ಕಾನೂನಿನ ವಿರುದ್ಧ ಕವಿತೆ ಬರೆದರೆ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗುತ್ತದೆ.‌ಶಾಲೆಯಲ್ಲಿ‌ ಮಕ್ಕಳು ಈ ದೇಶದ ಸರಕಾರದ ನೀತಿಯ ಬಗ್ಗೆ ಟೀಕೆ ಮಾಡಿ ನಾಟಕ ಮಾಡಿದಾಗ ಅವರ ವಿರುದ್ಧ ಕೂಡ ‘ದೇಶದ್ರೋಹದ’ ಪ್ರಕರಣ ದಾಖಲಾಗುತ್ತದೆ. ಪ್ರಜಾ ಪ್ರಭುತ್ವದಲ್ಲಿ ಜನರಿಂದ ಚುನಾಯಿತವಾದ ಒಂದು ಸರಕಾರ ಜಾರಿಗೆ ತರುವ ಯಾವುದೇ ಜನ ವಿರೋಧಿ ನೀತಿಯ ವಿರುದ್ಧ ಮಾತನಾಡುವುದು ‘ದೇಶ ದ್ರೋಹ’ ವಾಗುವುದಾದರೂ ಹೇಗೆ?. ಒಂದು ವೇಳೆ ಜನರು ಸರಕಾರದ ಸಂವಿಧಾನ ಬಾಹಿರ ನೀತಿಗಳನ್ನು ಪ್ರಶ್ನಿಸದೆ ಒಪ್ಪಿದರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯವೇ?

ಸ್ವಾತಂತ್ರ್ಯೋತ್ತರದಲ್ಲಿ ದೇಶವನ್ನು ಅಳಿದ ಬ್ರಿಟಿಷರು ತಮ್ಮ ವಿರುದ್ಧ ಮಾತನಾಡಿದ ಪ್ರತಿಯೊಬ್ಬರ ಮೇಲೂ ದೇಶದ್ರೋಹದ ಪ್ರಕರಣ ದಾಖಲಿಸುತ್ತಿದ್ದರು.‌ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್’ರನ್ನು ಆ ಕಾರಣಕ್ಕಾಗಿ ನೇಣಿಗೆ ಕೂಡ ಏರಿಸಿತ್ತು. ಕ್ಷಮಾಪಣೆ ಪತ್ರ ಬರೆದವರನ್ನು ಬಿಟ್ಟು ಬಿಡುತ್ತಿತ್ತು.‌ ಈ ಸರಕಾರ ಕೂಡ ಅಂತಹ ಹಾದಿಯಲ್ಲೇ ಮುನ್ನಡೆಯುತ್ತಿದೆಯೇ ಎಂಬ ಆತಂಕ ಮೂಡುವುದು ಸಹಜ.

ಇನ್ನು ಅದಕ್ಕಿಂತ ಅತೀ ಮುಖ್ಯ ವಿಚಾರವೆಂದರೆ ಭಾರತದಂತಹ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇನ್ನು ಕೂಡ 124 A ನಂತಹ ಸೆಕ್ಷನೊಂದು ಜಾರಿಗೆಯಲ್ಲಿರುವುದು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಿರುವಾಗ 1860 ರಲ್ಲಿ ಇಂಡಿಯನ್ ಪಿನಲ್ ಕೋಡ್ ಜಾರಿಗೆ ತಂದಿತ್ತು. ಭಾರತ ಸ್ವಾತಂತ್ರ್ಯವಾದ ನಂತರ ಕೆಲವು ತಿದ್ದುಪಡಿಗಳೊಂದಿಗೆ ಅದೇ ಕಾನೂನನ್ನು ಮುಂದುವರಿಸಲಾಯಿತು.‌ ಅದರಲ್ಲಿ ಬ್ರಿಟಿಷರು ಅಂದು ಭಾರತೀಯರ ವಿರುದ್ಧ ಬಳಸಿದ್ದ 121A ಇರಬಹುದು ಅಥವಾ 124A ಇರಬಹುದು ಅದು ಇಂದು ಕೂಡ ಮುಂದುವರಿಯುತ್ತಿದೆ. ಈ ಸೆಕ್ಷನ್’ಗಳಡಿಯಲ್ಲಿ ಬ್ರಿಟಿಷ್ ಸರಕಾರ ಸ್ವಾತಂತ್ರ್ಯ ಸೇನಾನಿಗಳನ್ನು ಬಂಧಿಸಿ ಜೈಲಿಗೆ ದೂಡುತ್ತಿತ್ತು. 124 A ಸೆಕ್ಷನ್ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿಯವರು ಕೂಡ ಜೈಲು ಶಿಕ್ಷೆ ಅನುಭವಿಸಿದ್ದು ಇತಿಹಾಸ. ಅಂತಹವೊಂದು ಕಾನೂನನ್ನು ಸ್ವಾತಂತ್ರ್ಯ ಭಾರತದಲ್ಲಿ ಮುಂದುವರಿಸಲಾಗುತ್ತಿದ್ದು, ಈ ದೇಶದಲ್ಲಿ ಸಂವಿಧಾನ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದಮನಿಸಲು ಈ ಕಾನೂನನ್ನು ಬಳಸಲಾಗುತ್ತಿದೆ ಎಂದರೆ ಅದು ಪ್ರಜಾಪ್ರಭುತ್ವ ದೇಶದ ಮೇಲೆ ಸರ್ವಾಧಿಕಾರದ ಭಯದ ಛಾಯೆ ಮೂಡಿಸುವುದು ಸುಳ್ಳಲ್ಲ. ಈ 124A ಸೆಕ್ಷನ್ ನನ್ನು ಕೇವಲ ಬಿಜೆಪಿ ಸರಕಾರವಲ್ಲ ಬದಲಾಗಿ ಈ ಮುಂಚಿನ ಎಲ್ಲ ಸರಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಒಂದು ಅಂದೋಲನದ ರೂಪದಲ್ಲಿ ಜನರು ಬೀದಿಗಿಳಿದಿರುವಾಗ 124A ಅವರ ಮೇಲೆ ಹಾಕಿ ‘ಮಾತಡಿದ್ರೆ ಹುಷಾರ್’ ಎಂಬ ಧೋರಣೆಯನ್ನು ಮೈಗೂಡಿಸಿದಂತೆ ಕಾಣುತ್ತಿದೆ. ಈಗಾಗಲೇ ಉತ್ತರ ಪ್ರದೇಶ, ದೆಹಲಿ, ಕರ್ನಾಟಕದಲ್ಲಿ ಹಲವಾರು ಮಂದಿ ಪ್ರತಿಭಟನಾಕಾರರ ಮೇಲೆ 124A ಪ್ರಯೋಗಿಸಿದೆ. ಹಲವು ಕಡೆಯಲ್ಲಿ ನ್ಯಾಯಾಲಯ ಈ ಸೆಕ್ಷನ್ ವಿಧಿಸಿದ್ದಕ್ಕೆ ಜಾಮೀನು ನೀಡುವ ಸಂದರ್ಭದಲ್ಲಿ ಪೊಲೀಸರನ್ನು, ಸರಕಾರವನ್ನು ತರಾಟೆಗೆ ತೆಗೆದುಕೊಂಡದ್ದು ಇದೆ. ಒಟ್ಟಿನಲ್ಲಿ ಸರಕಾರ ಒಂದು ಕಡೆ ದೇಶದ ಪ್ರಜೆಗಳ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ದೇಶದ ಸಂವಿಧಾನ ಉಳಿಸಲು ಒಂದು ದೊಡ್ಡ ಮಟ್ಟದ ಅಂದೋಲನ ದೇಶದ ಮೂಲೆ ಮೂಲೆಯನ್ನು ವ್ಯಾಪಿಸಿ ‘ಮಾತಡಿದ್ರೆ ಹುಷಾರ್’ ಎಂಬ ಸರಕಾರದ ಧೋರಣೆಗೆ ಕೈ ತೋರಿಸುತ್ತಲೇ ಇದೆ.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ನಾಗಾಸಾಕಿ-ಹಿರೋಶಿಮಾ ಪರಿಚಿತ ಹೆಸರಿನ ಹಿಂದಿರುವ ಭಯಾನಕ ದುಃಖ!

ಸರಿಯಾಗಿ ಇವತ್ತಿಗೆ ಎಪ್ಪತ್ತೈದು ವರ್ಷಗಳ ಹಿಂದೆ, 1945ರ ಆಗಸ್ಟ್ 6ರಂದು ಬೆಳಿಗ್ಗೆ ಎಂಟು ಗಂಟೆ ಹದಿನೈದು ನಿಮಿಷಕ್ಕೆ ಜಪಾನಿನ ಹಿರೋಶಿಮಾ ಮೇಲೆ ಅಣು ಬಾಂಬ್ ಹಾಕಲಾಯಿತು. ಇದಾಗಿ ಮೂರು ದಿನಗಳಿಗೆ, ಆಗಸ್ಟ್ 9ರಂದು...

ಸೈಟೋಕೈನ್ ಚಂಡಮಾರುತ: ಹಾಗೆಂದರೇನು?

ಒಂದು ಪುಟ್ಟ ಕಥೆ: ಒಂದು ದೇಶ, ಅದಕ್ಕೊಬ್ಬ ರಾಜ. ದೇಶದ ಒಂದು ಗಡಿಯಲ್ಲಿ ಶತ್ರುದೇಶದ ಸುಮಾರು ಐನೂರು ಸೈನಿಕರು ದಾಳಿ ಮಾಡುತ್ತಾರೆ. ರಾಜ ಯುದ್ಧ ಘೋಷಿಸಿ ಶತ್ರುಗಳನ್ನು ಮುಗಿಸಲು ಸೈನ್ಯಕ್ಕೆ ಕರೆ ನೀಡುತ್ತಾನೆ....

ಚೀನಾದವರು ಹತ್ತು ಲಕ್ಷ ಮುಸ್ಲಿಮರನ್ನು ಕೂಡಿಟ್ಟುಕೊಂಡು ಹಿಂಸಿಸುತ್ತಿದ್ದಾರಾ?

ನಿಜಾನಾ? ಚೀನಾದವರು ಹತ್ತು ಲಕ್ಷ ಮುಸ್ಲಿಮರನ್ನು ಕೂಡಿಟ್ಟುಕೊಂಡು ಹಿಂಸಿಸುತ್ತಿದ್ದಾರಾ? ವೊಕೇಷನಲ್ ಟ್ರೈನಿಂಗ್ ಕ್ಯಾಂಪ್ ಗಳ ಹೆಸರಲ್ಲಿ ಅಲ್ಲಿ ಮಾಡುತ್ತಿರುವುದು ಏನನ್ನು? ಉತ್ತರ ಚೀನಾದ ಪ್ರಾಂತ್ಯದಲ್ಲಿ ಎದ್ದಿರುವ ದೊಡ್ಡ ದೊಡ್ಡ ಕಟ್ಟಡಗಳು ಸಾವಿನ ಕೂಪಗಳಾಗಿವೆಯಾ?...
Translate »
error: Content is protected !!