ವಿಜಯಪುರ: ಉತ್ತರ ಕರ್ನಾಟಕ ಭಾಗಕ್ಕೆ ನೆರೆ ಅಪ್ಪಳಿಸಿ ಜನ ತತ್ತರಿಸುತ್ತಿದ್ದಾಗ ನಾನು ಈ ಕುರಿತು ಧ್ವನಿ ಎತ್ತದಿದ್ದರೆ 15 ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋಗಿರುತ್ತಿದ್ದರು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೇಳಿದ್ದಾರೆ.

ಕಳೆದ ಕೇಂದ್ರ ನೆರೆ ಪರಿಹಾರ ವಿಳಂಬವಾದ ಕುರಿತು ಶಾಸಕ ಯತ್ನಾಳ್ ಸ್ವಪಕ್ಷೀಯರ ವಿರುದ್ಧವೇ ಕಿಡಿಕಾರಿದ್ದರು. ಹೀಗಾಗಿ ಈ ಕುರಿತು ವಿವರಣೆ ನೀಡುವಂತೆ ಬಿಜೆಪಿ ಹೈಕಮಾಂಡ್ ಅವರಿಗೆ ಶೋಕಾಸ್​ ನೊಟೀಸ್ ಜಾರಿ ಮಾಡಿದೆ.  ಈ ಕುರಿತು  ವಿಜಯಪುರದಲ್ಲಿ ಇಂದು ಮಾತನಾಡಿರುವ ಯತ್ನಾಳ್, ” ಸಿಎಂ ಯಡಿಯೂರಪ್ಪನವರನ್ನು ಮುಗಿಸಲು ರಾಜ್ಯದ ಇಬ್ಬರು ಕೇಂದ್ರ ಸಚಿವರು ಯತ್ನಿಸುತ್ತಿದ್ದಾರೆ. ಈ ಬಗ್ಗೆ ನನಗೆ ದೆಹಲಿಯಿಂದ ಮಾಹಿತಿ ಸಿಕ್ಕಿದೆ.  ಕೇಂದ್ರ ಸಚಿವರೇ ಈ ಷಡ್ಯಂತ್ರ ರೂಪಿಸಿದ್ಧಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.