ನಾಳೆ ಅಯೋಧ್ಯೆ ತೀರ್ಪು : ಶಾಂತಿ ಕಾಪಾಡಲು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ 

-

ಜಾಹೀರಾತು

ಜಾಹೀರಾತು

ಉಡುಪಿ : ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಶನಿವಾರ  ಸುಪ್ರೀಂ ಕೋರ್ಟ್ ತೀರ್ಪು ನೀಡಲಿದ್ದು ತೀರ್ಪಿನ ಬಳಿಕ ಎಲ್ಲರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಕರೆ ನೀಡಿದ್ದಾರೆ. 
ಮಹತ್ವದ ಈ ಪ್ರಕರಣದಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯ ಸುದೀರ್ಘ ಸಮಯ ವಿಚಾರಣೆ ನಡೆಸಿ ಈಗ ತೀರ್ಪು ನೀಡುತ್ತಿದೆ. ತೀರ್ಪಿನ ಸ್ವರೂಪದ ಬಗ್ಗೆ  ಯಾರೂ ಜನರನ್ನು ಪ್ರಚೋದಿಸುವ, ಪರಸ್ಪರ ದ್ವೇಷ, ಅಪನಂಬಿಕೆ ಸೃಷ್ಟಿಸುವ , ವದಂತಿ ಹರಡುವ ಕೆಲಸಕ್ಕೆ ಇಳಿಯದೆ ಸುಪ್ರೀಂ ಕೋರ್ಟ್ ಹಾಗು ದೇಶದ ನ್ಯಾಯ ವ್ಯವಸ್ಥೆಯನ್ನು ಗೌರವಿಸಬೇಕು. ಎಲ್ಲ ರಾಜಕೀಯ ಪಕ್ಷಗಳು , ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಜಯೋತ್ಸವ, ಪ್ರತಿಭಟನೆ ನಡೆಸುವುದು ಅಥವಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು  ಇತ್ಯಾದಿ ಸಮಾಜದ ಶಾಂತಿ ಕದಡುವ ಸಾಧ್ಯತೆ ಇರುವ ಯಾವುದೇ ಕೃತ್ಯಗಳನ್ನು ಮಾಡದಂತೆ ತಮ್ಮ ಕಾರ್ಯಕರ್ತರು ಹಾಗು ಅಭಿಮಾನಿಗಳಿಗೆ ಸ್ಪಷ್ಟವಾಗಿ ಸೂಚಿಸಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಸಂದರ್ಭದಲ್ಲಿ ನೀಡುವ ಸೂಚನೆ, ಸಲಹೆಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 
ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಸಂದೇಶಗಳನ್ನು, ಚಿತ್ರಗಳನ್ನು, ಆಡಿಯೋ, ವಿಡಿಯೋಗಳನ್ನು ಹಾಕದೆ ಸಂಯಮದಿಂದ ವರ್ತಿಸಬೇಕು. ಈ ಅವಧಿಯಲ್ಲಿ ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳ ಮೇಲೆ ಪೊಲೀಸ್ ಇಲಾಖೆ ಕೂಡ ವಿಶೇಷ ನಿಗಾ ಇಟ್ಟು ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಾಸೀನ್ ಅವರು ತಿಳಿಸಿದ್ದಾರೆ. 

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದರೆ ಈಗಾಗಲೇ  ಆರ್ಥಿಕ ಹಿಂಜರಿತದಿಂದ ಕಷ್ಟದಲ್ಲಿರುವ ಬಡವರು, ಮಾಧ್ಯಮ, ಕೆಳ ಮಧ್ಯಮ ವರ್ಗಗಳ ಜನರು, ಕಾರ್ಮಿಕರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಸಮುದಾಯಗಳಿಗೆ, ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರಿಗೆ, ಯುವಜನತೆಗೆ , ಸಂಘಟನೆಗಳಿಗೆ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest news

CAA:Amu ನಲ್ಲಿ‌ ಪೊಲೀಸರ ಗೂಂಡಾ ವರ್ತನೆ; ದ್ವಿಚಕ್ರ ವಾಹನ ನಾಶ ಮಾಡಿದ ಪೊಲೀಸರು!

ಉತ್ತರ ಪ್ರದೇಶ: ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಸಿಡಿಸಿದ ಪೊಲೀಸರು ನಂತರ ಸುಮ್ಮನಾಗದೆ ಪೊಲೀಸರು ವಿದ್ಯಾರ್ಥಿಗಳ ದ್ವಿಚಕ್ರ ವಾಹನಗಳನ್ನು ನಾಶ ಮಾಡುವ ದೃಶ್ಯ...

ನಾನು ಮತ್ತು ನನ್ನ ದೇಶ ಜಾಮಿಯಾ ಮಿಲ್ಲಿಯಾ ವಿದ್ಯಾರ್ಥಿಗಳೊಂದಿಗಿದ್ದೇವೆ – ಇರ್ಫಾನ್ ಪಠಾಣ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಘಟನೆಯನ್ನು ಖಂಡಿಸಿ ಭಾರತೀಯ ಕ್ರಿಕೆಟ್...

ಟ್ವೀಟರ್ ಟ್ರೇಡಿಂಗ್: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು ಇದೀಗ ಗೃಹ ಸಚಿವ ಅಮಿತ್ ಶಾ ರವರು ರಾಜೀನಾಮೆ ನೀಡಬೇಕೆಂದು ಟ್ವಿಟರ್ ಟ್ರೇಡಿಂಗ್ ಆಗುತ್ತಿದೆ. ಜಾಮಿಯಾ...

ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಸಿಡಿದೆದ್ದ ಕನ್ನಡಿಗರು!

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಟೌನ್ ಹಾಲ್ ಬಳಿ ಭಾನುವಾರ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಜೊತೆ ಸೇರಿ ಪೌರತ್ವ ತಿದ್ದುಪಡಿ ಕಾಯಿದೆಯ ವಿರುದ್ಧ ಪ್ರತಿಭಟಿಸಿದರು. ತ್ರಿವರ್ಣ...
- Advertisement -

CAA: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಾಕಿದ್ದು ಪೊಲೀಸರೇ!

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ್ದು ಪೊಲೀಸರೆಂದು ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ವಿವಾದಾಸ್ಪದವಾಗಿ ಕ್ಯಾನ್ ಹಿಡಿದು ಬಸ್ ಬಳಿ ಹೋಗುವ...

CAA: ರಣರಂಗವಾದ ಜಾಮೀಯ ಮಿಲ್ಲಿಯಾ; ಪೊಲೀಸರಿಂದ ಮುಂದುವರಿದ ದೌರ್ಜನ್ಯ!

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆಯು ಭಾರತದಲ್ಲಿ ಅರಾಜಕತೆ ಉಂಟು ಮಾಡುತ್ತಿದ್ದು, ಎಲ್ಲೆಡೆಯೂ ಪ್ರತಿಭಟನೆಯ ಕಾವು ಜೋರಾಗಿದೆ. ಇಂದು ದಕ್ಷಿಣ ದೆಹಲಿಯ ಜಾಮಿಯಾ‌ ಮಿಲ್ಲಿಯಾ ಇಸ್ಲಾಮಿಯ ವಿದ್ಯಾರ್ಥಿಗಳು ಶಾಂತಿಯುತ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...
- Advertisement -

You might also likeRELATED
Recommended to you