ಕಲಬುರ್ಗಿ : ಮೋದಿಗೆ ನೇಣು ಹಾಕಿಕೊಳ್ಳಲು ರಸ್ತೆ ರೆಡಿ ಇದೆ ಎಂದು ಪ್ರಿಯಾಂಕ್ ಖರ್ಗೆ ನೀಡಿದ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ಇಂದು ತಿರುಗೇಟು ನೀಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಏನು ತಿಳಿದಿದೆ? ಮಂತ್ರಿ ಆಗಿದ್ದೀನಿ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು, ಮೊದಲು ಅಪ್ಪ ಮಗ ಕಲಬುರ್ಗಿಯಲ್ಲಿ ಗೆದ್ದು ತೋರಿಸಲಿ ಎಂದು ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರಿಗೆ ಯಡಿಯೂರಪ್ಪ ಸವಾಲು ಹಾಕಿದರು.

ಇನ್ನು, ಮೇ 23ರ ನಂತರ ಬಿಜೆಪಿಯವರೇ ತಮ್ಮತ್ತ ಬರುತ್ತಾರೆಂದ ಕೆ.ಸಿ. ವೇಣುಗೋಪಾಲ್ ಅವರಿಗೂ ಯಡಿಯೂರಪ್ಪ ತಿರುಗೇಟು ನೀಡಿದರು. ವೇಣುಗೋಪಾಲ್ಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ನಾವು ಕರ್ನಾಟಕದಲ್ಲಿ 22 ಸೀಟು ಗೆಲ್ಲುತ್ತೇವೆ. ಅವರು ಎಷ್ಟು ಗೆಲ್ಲುತ್ತಾರೆಂದು ಬಹಿರಂಗವಾಗಿ ಹೇಳಲಿ ಎಂದು ಬಿಎಸ್ವೈ ಚಾಲೆಂಜ್ ಮಾಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.