ಮಂಡ್ಯ(ಸೆ. 13):ಬಿಜೆಪಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೆಲ ಆರೋಪಗಳಿಗೆ ಪುಷ್ಟಿ ನೀಡುವಂತೆ ಮಂಡ್ಯದ ಸ್ಥಳೀಯ ಬಿಜೆಪಿ ಮುಖಂಡರು ಹಾಲು ಒಕ್ಕೂಟದ ವಿಚಾರದಲ್ಲಿ ಮುಖ್ಯಮಂತ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮನ್​ಮುಲ್​​ಗೆ ಸಿಎಂ ನಾಮ ನಿರ್ದೇಶನ ಮಾಡಿರುವ ಹೆಸರನ್ನು ತಡೆ ಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.

ಮಂಡ್ಯದ ಮನಮುಲ್​​​​​ಗೆ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರು ತಮ್ಮ ಬೆಂಬಲಿಗ ಪ್ರಸನ್ನ ಎಂಬುವರಿಗೆ ನಾಮ ನಿರ್ದೇಶನ ಮಾಡುವಂತೆ ಸಿಎಂ ಬಿಎಸ್​ವೈ ಗೆ ಮನವಿ ಮಾಡಿದ್ದರು.ಸಿಎಂ ಬಿಎಸ್​ವೈ ಅವರು ಸೆಪ್ಟೆಂಬರ್​ 11 (ಬುಧವಾರ) ಪ್ರಸನ್ನ ಅವರ ಹೆಸರನ್ನು ಅನುಮೋದನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮಂಡ್ಯ ಬಿಜೆಪಿಯಲ್ಲಿ ಅಸಮದಾನದ ಹೊಗೆ ಭುಗಿಲೆದ್ದಿದೆ.ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರು ಮಂಡ್ಯ ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವೂ ಇದೆ. ಪ್ರಸನ್ನ ಅವರು ಕಾಂಗ್ರೆಸ್ ಪಕ್ಷದಿಂದ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದರು. ಅವರ ಬದಲು ಪಕ್ಷದ ಕಾರ್ಯಕರ್ತರಿಗೆ ಅಥವಾ ಅಧ್ಯಕ್ಷರಿಗೆ ಅವಕಾಶ ನೀಡಿ. ಪಕ್ಷದ ಜಿಲ್ಲಾ ಸಮಿತಿ ಸೂಚಿಸಿದ ಹೆಸರನ್ನು ಪರಿಗಣಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್​ ಕಟೀಲ್​​​ ಅವರಿಗೆ ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪತ್ರವನ್ನು ಬರೆದಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.