ಬೆಂಗಳೂರು: ನಾಟಕಕಾರ, ನಟ, ನಿರ್ದೇಶಕ , ಕನ್ನಡಕ್ಕೆ 7ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಿರುವ  ಗಿರೀಶ್ ಕಾರ್ನಾಡ್ ಅವರ ಅಗಲಿಕೆ  ನಮ್ಮ ರಾಜ್ಯಕ್ಕೆ ,ದೇಶಕ್ಕೆ ಹಾಗೂ ಸಾಹಿತ್ಯ ಲೋಕಕ್ಕೆತುಂಬಲಾರದ ನಷ್ಟ ವಾಗಿದೆ ಎಂದು ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷರಾದ  ಶ್ರೀಮಾನ್ ತಾಹಿರ್ ಹುಸೇನ್  ವಿಷಾದ ವ್ಯಕ್ತ ಪಡಿಸಿದರು.

ಅವರ ಸಾಹಿತ್ಯ ಸೇವೆ ಚಿತ್ರರಂಗದದೊಂದಿಗಿನ ನಂಟು ಅಪಾರ. ಇತಿಹಾಸವನ್ನು  ಆಧರಿಸಿ ಬರೆದ ನಾಟಕಗಳು ಇಂದಿನ ವಸ್ತುಸ್ಥಿತಿ ವಿಶ್ಲೇಷಿಸುವ ರೀತಿ ಅಪೂರ್ವವಾದುದ್ದು. ಚಲನ ಚಿತ್ರರಂಗದಲ್ಲಿ ನಟನೆ ಹಾಗು ನಿರ್ದೇಶನ ದಲ್ಲಿ ತಮ್ಮದೆ ಛಾಪು ಮೂಡಿಸಿದರು.ನಾಡಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಹೊಳಪು ನೀಡಿದ್ದರು. ದೇಶದಲ್ಲಿ  ಕೋಮುಸೌಹಾರ್ದತೆ ನ್ಯಾಯ ಸಮ್ಮತವಾದ ಹಾಗೂ ಅನ್ಯಾಯಕ್ಕೊಳಗಾದವರ ಪರ ಹೋರಾಟದ ಕೆಚ್ಚಿನಿಂದಲೇ ಇಡಿ ದೇಶಕ್ಕೆ ಮಾದರಿಯಾಗಿದ್ದ ಕಾರ್ನಾಡ್ ಅವರ ಸಾಧನೆ ಶ್ಲಾಘನೀಯ.

ಕಾರ್ನಾಡ್ ಅವರಿಗೆ ಜ್ಞಾನ ಪೀಠ ಪ್ರಶಸ್ತಿ, ಪದ್ಮಶ್ರೀ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದ್ದವು,  ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಪ್ರಮುಖ ನಾಟಕ ಕೃತಿಗಳನ್ನು  ನಮ್ಮ ನಾಡಿಗೆ ಪರಿಚಯಿಸಿದ ಇಂತಹ ಮಹಾನ್ ವ್ಯಕ್ತಿ ನಮ್ಮನು ಅಗಲಿರುವುದು ವಿಷಾದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಟಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.