ಲಂಡನ್ : ಒಂದು ಕಡೆ ಭಾರತದಂತಹ ಬಲಿಷ್ಠ ತಂಡವನ್ನು ಸೋಲಿಸಿ ಫೈನಲ್ ಗೇರಿರುವ ನ್ಯೂಝಿಲೆಂಡ್ ಇನ್ನೊಂದು ಕಡೆ ಆಸ್ಟ್ರೇಲಿಯಾ ವನ್ನು ಸೋಲಿಸಿ ಫೈನಲ್ ಗೇರಿರುವ ಇಂಗ್ಲೆಂಡ್ ಗಳ ನಡುವೆ ಇಂದು ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೆ ಬಿಗ್ ಫೈಟ್ ನಡೆಯಲಿದೆ.

ಎರಡು ತಂಡಗಳು ಬಲಿಷ್ಟವಾಗಿದ್ದು ತವರಿನ ಅಭಿಮಾನಿಗಳ ಲಾಭದ ಜತೆ ಬಲಿಷ್ಠ ಬ್ಯಾಟಿಂಗ್‌ ಶಕ್ತಿ ಹೊಂದಿರುವ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವೆನಿಸಿದೆ. ನಾಲ್ಕನೇ ಬಾರಿ ಅದೃಷ್ಟ ಕೈಹಿಡಿಯುವ ನಿರೀಕ್ಷೆಯನ್ನು ಹೊಂದಿದೆ. 1979, 1987 ಮತ್ತು 1992ರ ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್‌ ಸೋತು ನಿರಾಶೆ ಅನುಭವಿಸಿತ್ತು. ಜಾನಿ ಬೇರ್‌ಸ್ಟೊ, ಜಾಸನ್‌ ರಾಯ್‌, ಜೋ ರೂಟ್‌, ಜಾಸ್‌ ಬಟ್ಲರ್‌ ಮತ್ತು ಬೆನ್‌ ಸ್ಟೋಕ್ಸ್‌ ಇಂಗ್ಲೆಂಡಿನ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಅವರಲ್ಲಿ ಒಂದಿಬ್ಬರು ಮಿಂಚಿದರೂ ಇಂಗ್ಲೆಂಡ್‌ ಲಾರ್ಡ್ಸ್‌ನಲ್ಲಿ ವಿಜಯೋತ್ಸವ ಆಚರಿಸುವ ಸಾಧ್ಯತೆ ಹೆಚ್ಚು!

ಇಂಗ್ಲೆಂಡಿಗೆ ಹೋಲಿಸಿದರೆ ನ್ಯೂಜಿಲ್ಯಾಂಡಿನ ಬ್ಯಾಟಿಂಗ್‌ ಅಷ್ಟೊಂದು ಬಲಿಷ್ಠವಾಗಿಲ್ಲ. ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ ಮತ್ತು ಕಾಲಿನ್‌ ಮುನ್ರೊ ಮಿಂಚಲು ವಿಫ‌ಲರಾಗಿದ್ದಾರೆ. ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್‌ ಟೇಲರ್‌ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ವಿಲಿಯಮ್ಸನ್‌ ಇಷ್ಟರವರೆಗೆ 548 ರನ್‌ ಪೇರಿಸಿದರೆ ಟೇಲರ್‌ 335 ರನ್‌ ಗಳಿಸಿದ್ದಾರೆ. ಅವರಿಬ್ಬರೂ ಫೈನಲ್‌ನಲ್ಲೂ ಅಮೋಘವಾಗಿ ಆಡಿದರೆ ಕಿವೀಸ್‌ಗೂ ಅವಕಾಶವಿದೆ. ಅವರ ಮತ್ತು ಬೌಲರ್‌ಗಳ ಉತ್ತಮ ನಿರ್ವಹಣೆಯಿಂದ ನ್ಯೂಜಿಲ್ಯಾಂಡ್‌ ಫೈನಲ್‌ವರೆಗೆ ಮುನ್ನಡೆದಿದೆ. ಇದರ ಜತೆ ಅದೃಷ್ಟದ ಬಲವೂ ಇತ್ತು.

ಟ್ರೆಂಟ್‌ ಬೌಲ್ಟ್ ಮತ್ತು ಮ್ಯಾಟ್‌ ಹೆನ್ರಿ ಮತ್ತೂಮ್ಮೆ ನಿಖರ ದಾಳಿ ಸಂಘಟಿಸಿದರೆ ನ್ಯೂಜಿಲ್ಯಾಂಡಿಗೂ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚು!

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.