ಕೊಸ್ಟಲ್ ಮಿರರ್.ಕಾಮ್ : ವಾಟ್ಸ್ ಆ್ಯಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ವಾಟ್ಸ್ ಆ್ಯಪ್ ಸಂಸ್ಥೆ ಕೂಡ ತನ್ನ ಫೀಚರ್ಗಳನ್ನು ಅಭಿವೃದ್ದಿಪಡಿಸುತ್ತಾ ಬಂದಿದೆ. ಹಿಂದೆ ವಾಟ್ಸ್ ಆ್ಯಪ್ನಿಂದಲೇ ಹಣ ವರ್ಗಾವಣೆ ಮಾಡಲು ಅನುಕೂಲವಾಗುವ ಫೀಚರ್ ಅನ್ನ ಅಭಿವೃದ್ದಿ ಪಡಿಸಿತ್ತು. ಇದೀಗ ಮತ್ತೊಂದು ಹೊಸ ಫೀಚರ್ ಬಿಡುಗಡೆ ಮಾಡಿದೆ.

ವಾಟ್ಸ್ ಆ್ಯಪ್ ಬಳಕೆದಾರರು ಇನ್ಮುಂದೆ ವಾಟ್ಸ್ ಆ್ಯಪ್ನಲ್ಲೇ ಶಾಪಿಂಗ್ ಕೂಡ ಮಾಡಬಹುದಾಗಿದೆ. ಅಮೇರಿಕಾದ ಸ್ಯಾನ್ ಜೋಸ್ನಲ್ಲಿ ನಡೆದ ಫೇಸ್ಬುಕ್ಎಫ್​-8 ಸಮ್ಮೇಳನದಲ್ಲಿ ವಾಟ್ಸ್ ಆ್ಯಪ್ ಸಂಸ್ಥೆ ಹೊಸ ಫೀಚರ್ಅನ್ನು ಘೋಷಿಸಿದೆ. ಮುಂಬರುವ ತಿಂಗಳಲ್ಲಿ ಹೊಸ ಆಯ್ಕೆ ವಾಟ್ಸ್ ಆ್ಯಪ್ನಲ್ಲಿ ಲಭ್ಯವಾಗಲಿದೆ. ಆ್ಯಂಡ್ರಾಯ್ಡ್ ಮೊಬೈಲ್ ಬಳಕೆದಾರರು ತಮ್ಮ ವಾಟ್ಸ್ ಆ್ಯಪ್ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ನೋಡಿ ಖರೀದಿಸಬಹುದಾದ ಹೊಸ ಕ್ಯಾಟಲಾಗ್ಬಿಡುಗಡೆಗೊಳಿಸಿದೆ. ಅಲ್ಲದೇ ತಮ್ಮ ಇಷ್ಟದ ಆಯ್ಕೆಯ ವಸ್ತುಗಳನ್ನ ಶೇರ್ ಮಾಡುವ ಹಾಗೂ ವ್ಯಾಪರಸ್ಥರ ಜೊತೆ ಚಾಟ್ ಮಾಡುವ ಅವಕಾಶ ಕೂಡ ಇದರಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.