ಉಡುಪಿ – ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು 72ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾದ ಜಿ ರಾಜ್ ಶೇಕರ್ ಧ್ವಜರೋಹಣವನ್ನು ನೆರೆವೇರಿಸಿ, ದೇಶದಲ್ಲಿನ ಸಮಸ್ಯೆಗಳ ಬಗ್ಗೆ, ಬಡವರಿಗೆ ಮತ್ತು ಇಲ್ಲಿನ ಸಾಮಾನ್ಯ ವರ್ಗದವರಿಗೆ ಸ್ವಾತಂತ್ರೋತ್ಸವ ಎನ್ನುವಂತಹದು ಹೆಸರಿಗೆ ಮಾತ್ರವಾಗಿದೆ ಎಂದು ನುಡಿದರು.ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ವೆಲ್ಫೇರ್ ಪಾರ್ಟಿಯ ರಾಜ್ಯ ಕಾರ್ಯದರ್ಶಿಯಾದ ಅನ್ವರ್ ಅಲಿ ಕಾಪು ಮಾತನಾಡಿ ವೆಲ್ಪೇರ್ ಪಾರ್ಟಿಯ ಕಾರ್ಯವೈಕರಿಯ ಬಗ್ಗೆ ತಿಳಿಸಿದರು. ವೆಲ್ಪೇರ್ ಪಾರ್ಟಿ ಉಡುಪಿ ಜಿಲ್ಲಾದ್ಯಕ್ಷರಾದ ಅಬ್ದುಲ್ ಅಝೀಝ್ ಉದ್ಯಾವರ್ ಮಾತನಾಡಿ ದೇಶದಲ್ಲಿ ಇಂದು ಭಯದ ವಾತವರಣ ನಿರ್ಮಾಣವಾಗಿದೆ ಹೆಸರಿಗೆ ಮಾತ್ರ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಗಿತ್ತಿದ್ದೆ ಆದರೆ ಈ ದೇಶದಲ್ಲಿ ತಮ್ಮ ಸಿದ್ದಾಂತವನ್ನು ಪ್ರಸ್ತುತ ಪಡಿಸುವವರ ಧ್ವನಿಯನ್ನು ದಮನಿಸಲಾಗುತ್ತಿದೆ.

ಈ ದೇಶದಲ್ಲಿ ಎರಡು ರೀತಿಯ ಕಾವಿ ಹಾಕಿದವರನ್ನು ನಾವು ಕಾಣಬಹುದಾಗಿದೆ. ಒಂದು ಕಡೆಯಲ್ಲಿ ಕಾವಿದಾರಿಗಳ ಮುಖವಾಡ ಕಳಚಿ ಬೀಳುತ್ತಿದ್ದರೆ ಇನ್ನೋಂದು ಕಡೆಯಲ್ಲಿ ಸ್ವಾಮಿ ಅಗ್ನೀವೇಶ್ ರಂತರ ಮೇಲೆ ಹಾಡು ಹಗಲೆ ಹಲ್ಲೆ ನಡೆಸಲಾಗುತ್ತಿದ್ದಿದೆ ಎಂದರು, ಕಳೆದ ವಾರ ಮರಣ ಹೊಂದಿದ ಸೋಮನಾಥ್ ಚಟರ್ಜಿಯವರನ್ನು ಈ ಸಂದರ್ಭದಲ್ಲಿ ಸ್ಮರಿಸದರು. ಕೇರಳದಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೆರೆ ಹಾವಳಿಗೆ ತುತ್ತಾಗಿರುವ ಪ್ರದೇಶಕ್ಕೆ ವೆಲ್ಪೇರ್ ಪಾರ್ಟಿ ಕಾರ್ಯಕರ್ತರು ಧಾವಿಸಿ ತುರ್ತು ಕಾರ್ಯವನ್ನು ನೆರೆಸುತ್ತಿದ್ದು ಉಡುಪಿ ಜಿಲ್ಲೆಯಲ್ಲಿ ವಿವಿಧ ತಂಡಗಳನ್ನು ರಚಿಸಿರುವ ಬಗ್ಗೆ ತಿಳಿಸಿದರು. ಕಾರ್ಯಕರ್ತರಾದ ರಿಯಾಝ್ ಅಹಮದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.