ಉಡುಪಿ : ಕರ್ತವ್ಯ ನಿರತ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಮತ್ತು ಓರ್ವ ಜನಪ್ರತಿನಿಧಿ ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆನಡಿಸಿದ್ದು ಅತ್ಯಂತ ಅಮಾನವೀಯ ಘಟನೆ. ಒಬ್ಬ ಜನರಿಂದ ಆಯ್ಕೆಯಾದ ಜನಪ್ರಧಿನಿಧಿ ಇಂತಹ ಘಟನೆ ಇಡೀ ಉಡುಪಿ ಜಿಲ್ಲೆಯನ್ನು ಅವಮಾನಿಸಿದೆ ಮತ್ತು ಸರಕಾರಿ ಅಧಿಕಾರಿಗಳು ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಲು ಅಡ್ಡಿಯಾಗಿದೆ.

ಜನಪರ ಆಡಳಿತ ನೀಡುತ್ತೇವೆಂದು ಅಧಿಕಾರಕ್ಕೆ ಬಂದ ಬಿ ಜೆ ಪಿ ಉಡುಪಿ ನಗರವನ್ನು ಎತ್ತ ಕೊಂಡೊಯ್ಯುತ್ತದೆ ಎಂಬುದನ್ನು ತಿಳಿಯಬಹುದು. ಇಂತಹ ಗೂಂಡಾ ಮಾನಸಿಕತೆಯನ್ನು ಶಿಕ್ಷೆಗೊಳಿಸದಿದ್ದಲ್ಲಿ ಇಂತಹ ಘಟನೆಗಳು ಮರುಕಳಿಸಬಹುದು. ಆದ್ದರಿಂದ ಕಾನೂನುಪಾಲಕರು ಇವರನ್ನು ಶಿಕ್ಷಿಸಿ ಕ್ರಮಕೈಗೊಳ್ಳಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ಅದ್ಯಕ್ಷ ಅಬ್ದುಲ್ ಅಝೀಜ್ ಉದ್ಯಾವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.