ಮಂಗಳೂರು: ಯುವತಿಯೊಬ್ಬಳನ್ನು ಅಪಹರಿಸಲಾಗಿದೆಯೆಂದು ಕಲ್ತೂರು ಪ್ರದೇಶದಲ್ಲಿ ಉದ್ವಿಗ್ನ ವಾತವರಣ ಏರ್ಪಟ್ಟಿತ್ತು.ಆದರೆ ಇದೀಗ ಅಪಹರಣವಾಗಿದ್ದರೆಂದು ಭಾವಿಸಿದ್ದ ಯುವತಿ ಪಂಚಮಿ ( 21) ತಾನು ಮದುವೆಯಾಗಿರುವ ಯುವಕನೊಂದಿಗೆ ಮದುವೆಯಾಗಿ ವೀಡಿಯೋ ಸಂದೇಶ ರವಾನಿಸಿದ್ದು, ನನ್ನನ್ನು ಯಾರು ಅಪಹರಿಸಿಲ್ಲ, ನನ್ನ ಇಚ್ಚೆ ಅನುಸಾರ ಮದುವೆಯಾಗಿದ್ದೇನೆ. ನನ್ನನ್ನು ಹುಡುಕುವ ಅಗತ್ಯವಿಲ್ಲ. ನಮಗೆ ಸಮಸ್ಯೆ ಮಾಡಿದರೆ ನಾವಿಬ್ಬರು ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಆರ್ಯ ಸಮಾಜ ಬಲ್ಮಠದಲ್ಲಿ ಸುಪ್ರೀತ್ (25) ಮತ್ತು ಪಂಚಮಿ (21) ಮದುವೆಯಾಗಿರುವ ಬಗ್ಗೆ ತಿಳಿದು ಬಂದಿದೆ. ವೀಡಿಯೋ ದಲ್ಲಿ ತಿಳಿಸಿರುವಂತೆ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಇಬ್ಬರು ಸ್ವತಃ ಮನೆಬಿಟ್ಟು ಹೋಗಿ ಮದುವೆಯಾಗಿರುವುದಾಗಿ ಸುಪ್ರೀತ್ ವೀಡಿಯೋ ದಲ್ಲಿ ತಿಳಿಸಿದ್ದಾರೆ.

ಆದರೆ ಸೋಮವಾಗ ಅಪ್ರಾಪ್ತ ಬಾಲಕಿಯನ್ನು ಅನ್ಯಕೋಮಿನ ಯುವಕ ಅಪಹರಣ ಮಾಡಿದ್ದಾನೆಂಬ ಸುಳ್ಳು ವದಂತಿ ಹಬ್ಬಲಾಗಿತ್ತು. ಇದೀಗ ಇಬ್ಬರು ಮದುವೆಯಾಗಿ ವೀಡಿಯೋ ಸಂದೇಶ ರವಾನಿಸಿರುವ ಕಾರಣ ಕಿಡಿಗೇಡಿಗಳು ಸಮುದಾಯಗಳ ನಡುವೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದವರ ಹಿನ್ನಡೆಯಾಗಿದೆ. ಈ ಮುಂಚೆ ಕೆಲವು ಜನರು ಒಟ್ಟುಗೂಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ಉಂಟು ಮಾಡಿದ್ದರು ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಗುಂಪು ಚದುರಿಸಿದ್ದರು. ಇದೀಗ ಸುಪ್ರೀತ್ ಮತ್ತು ಪಂಚಮಿ ಮದುವೆಯಾಗಿ ಕೀಡಿಗೇಡಿಗಳು ಹಬ್ಬಿಸಿದ್ದ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ.

 

ವೀಡಿಯೋ ಕೃಪೆ: ಡೈಜಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.