ಮಂಗಳೂರು: ಸೇತುವೆಯ 8ನೇ ಕಂಬದಿಂದ ವ್ಯಕ್ತಿಯೊಬ್ಬರು ನೀರಿಗೆ ಹಾರಿದ್ದನ್ನು ಮೀನುಗಾರರೊಬ್ಬರು ಕಣ್ಣಾರೆ ಕಂಡಿದ್ದಾರೆ ಎನ್ನುವ ಮಾಹಿತಿ ಲಬ್ಯವಾಗಿರುವ ಹಿನ್ನಲೆಯಲ್ಲಿ ಈಗ ಕಾರ್ಯಾಚರಣೆ ನಡೆಯುತ್ತಿದೆ.

ಕಾಫಿ ಡೇ ಮಾಲೀಕರಾಗಿರುವ ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ. ರಾತ್ರಿ 8 ಗಂಟೆಯ ವೇಳೆಗೆ ಮೀನುಗಾರರೊಬ್ಬರು ಜಪ್ಪಿನಮೊಗರು ಸೇತುವೆಯಿಂದ ವ್ಯಕ್ತಿಯೊಬ್ಬ ಹಾರಿದ್ದನ್ನು ಕಣ್ಣಾರೆ ಕಣ್ಣಾರೆ ಕಂಡಿದ್ದು ಈಗ ಯು.ಟಿ ಖಾದರ್ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.

ತುವೆಯ ಎಂಟನೇ ಕಂಬದ ಮುಂಭಾಗದಿಂದ ವ್ಯಕ್ತಿಯೊಬ್ಬರು ನೀರಿಗೆ ಬಿದ್ದದನ್ನು ನಾನು ಕಣ್ಣಾರೆ ಕಂಡಿದ್ದೇನೆ. ನದಿಯಲ್ಲಿ ಸುಮಾರು 50 ಮೀಟರ್ ಅವರು ಸಾಗಿದ್ದಾರೆ.ಆದರೆ ಅವರು ನೀರಿಗೆ ಬೀಳುವಾಗ ನಾನು ಒಬ್ಬನೇ ಇದ್ದೆ. ಹಾಗಾಗಿ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಮೀನುಗಾರನೊಬ್ಬ ಹೇಳಿದ್ದಾರೆ. ಅವರ ಮಾಹಿತಿ ಆಧಾರಿಸಿ ಸೇತುವೆಯ ಎಂಟನೇ ಕಂಬದ ನೇರಕ್ಕೆ ಕಾರ್ಯಾಚರಣೆ ನಡೆಯುತ್ತಿದೆ

ಸೋಮವಾರ ರಾತ್ರಿಯಿಂದ ನಮ್ಮ ಜಿಲ್ಲಾಡಳಿತ, ಪೊಲೀಸರು ಬೇರೆ ಬೇರೆ ತಂಡದವರು ಸಕ್ರಿಯವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.