ಇಸ್ಲಾಮಾಬಾದ್: ಕಾಶ್ಮೀರದ ವಿಧಿ 370 ರ ರದ್ಧತಿಯ ನಂತರ ಯುದ್ಧಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ವಲಯದಲ್ಲಿ ನಡೆಯುತ್ತಿದೆ. ಇದೀಗ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂದರ್ಶನವೊಂದರಲ್ಲಿ ಮಾತನಾಡಿ, ನನಗೆ ಯುದ್ದದಲ್ಲಿ ಆಸಕ್ತಿ ಇಲ್ಲ. ಯುದ್ಧದಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಾನು ನಂಬುವುದಿಲ್ಲ. ವಿಯೆಟ್ನಾಮ್‌, ಇರಾಖ್‌ ನಲ್ಲಿ ನಡೆದ ಯುದ್ಧಗಳನ್ನು ಗಮನಿಸಿದರೆ ಯಾವ ಕಾರಣಗಳಿಗಾಗಿ ಯುದ್ಧವಾಗಿತ್ತೋ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳು ಯುದ್ದದಿಂದ ಸೃಷ್ಟಿಯಾಗಿದೆ ಎಂದರು.

ಎರಡು ಪರಮಾಣು ಬಾಂಬ್‌ ಹೊಂದಿದ ದೇಶಗಳು ಸಾಂಪ್ರದಾಯಿಕ ಯುದ್ದ ಆರಂಭಿಸಿದರೂ ಅದು ಅಣು ಯುದ್ಧದದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.