ವಿರಾಟ್ ಕೊಹ್ಲಿಗೆ ಪಾಕಿಸ್ತಾನದ ಬೌಲರ್ ಗಳ ಎದುರು ರನ್ ಗಳಿಸಲು ಕಷ್ಟ – ಮಿಕ್ಕಿ ಆರ್ಥರ್

ಪಾಕಿಸ್ತಾನ: ಭಾರತದ ನಾಯಕ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ನೀಡಿರುವ ಹೇಳಿಕೆ ಇದೀಗ ಕ್ರಿಕೆಟ್ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವಿರಾಟ್ ಕೊಹ್ಲಿ ಒರ್ವ ಉತ್ತಮ ಆಟಗಾರ ಅವರ ಬ್ಯಾಟಿಂಗ್ ನಿಜಕ್ಕೂ ಅದ್ಬುತ ಆದರೆ ಅವರು ಪಾಕಿಸ್ತಾನದ ಎದುರು ರನ್ ಗಳಿಸಲು ಪರದಾಡಿದ್ದಾರೆ. ಪಾಕಿಸ್ತಾನ್ ಬೌಲರ್ ಗಳ ಎದುರು ವಿರಾಟ್ ಗೆ ರನ್ ಗಳಿಸಲು ಸಾಧ್ಯವಾಗುವುದಿಲ್ಲವೆಂದು ಅರ್ಥರ್ ವಿರಾಟ್ ಕೊಹ್ಲಿಗೆ ಸಾವಾಲೆಸೆದಿದ್ದಾರೆ. ಕಳೆದ ವಾರ ದಕ್ಷಿಣ ಆಫ್ರಿಕಾದ ವಿರುದ್ದ ಕೊಹ್ಲಿ 32 ನೇ ಶತಕ ಬಾರಿಸಿದ್ದರು. 2012 ರಿಂದ ಇದುವರೆಗೆ ಎರಡು ಬಾರಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್ ಮೆನ್ ಪ್ರಶಸ್ತಿಗೂ ಭಾಜನರಾಗಿದ್ದರು. ಈಗ ಅರ್ಥೂರ್ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ಕೊಂಡಾಡಿ ಪಾಕಿಸ್ತಾನದ ಬೌಲರ್ ಗಳ ಎದುರು ರನ್ ಗಳಿಸುವುದು ಕಷ್ಟವೆಂದು ಹೇಳುವ ಮೂಲಕ ವಿರಾಟ್ ಗೆ ಸವಾಲೆಸೆದಿದ್ದಾರೆ.