ವೆಸ್ಟ್ ಇಂಡೀಸ್ ಪ್ರವಾಸದ ಮೊದಲು ವಿರಾಟ್ ಸುದ್ದಿಗೋಷ್ಠಿ

231

ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟ್ ತಂಡ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಸೋಮವಾರ ಮುಂಬೈಯಿಂದ ಹೊರಡಲಿದೆ. ಹೊರಡುವ ಮುನ್ನ ನಾಳೆ (ಜುಲೈ 29)ರಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಅಮೆರಿಕ ಪ್ರವಾಸಕ್ಕೆ ಮುನ್ನ ಕೊಹ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ ಅವರು ಸೋಮವಾರ ಸಂಜೆ 6 ಗಂಟೆಗೆ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ನಂತರವೇ ಪ್ರವಾಸ ಹೊರಡಲಿದ್ದಾರೆ ಎಂದಿದೆ ಬಿಸಿಸಿಐ.

ಆಗಸ್ಟ್ 3ನೇ ತಾರೀಖಿನಿಂದ ಪ್ಲೋರಿಡಾದಲ್ಲಿ ಭಾರತ ಎರಡು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ. ಆಮೇಲೆ ವೆಸ್ಟ್ ಇಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಟೀಂ ಇಂಡಿಯ ಮೂರು ಟಿ-ಟ್ವೆಂಟಿ ಮತ್ತು 2 ಟೆಸ್ಟ್ ಪಂದ್ಯಗಳನ್ನು ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ನಡುವೆ ಶೀತಲಸಮರವೇರ್ಪಟ್ಟಿದೆ ಎಂಬ ವದಂತಿ ಹಬ್ಬಿದ್ದರ ಜತೆಗೆ ಕೊಹ್ಲಿ ಸುದ್ದಿಗೋಷ್ಠಿ ನಡೆಸುವುದಿಲ್ಲ ಎಂಬ ಸುದ್ದಿ ಕೇಳಿಬಂದಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.