ಗುಜರಾತ್: ವಾಯು ಚಂಡಮಾರುತ ಅಪ್ಪಳಿಸುವ ಭೀತಿಯಲ್ಲಿದ್ದ ಗುಜರಾತಿಗೆ ಇದೀಗ ರಿಲೀಫ್ ದೊರಕಿದ್ದು, ತನ್ನ ದಿಕ್ಕು ಬದಲಾಯಿಸಿ ಒಮನ್ ಕಡೆಗೆ ಸಾಗುತ್ತಿದೆಯೆಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮಾಹಿತಿ ನೀಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಸ್ಥಳಾಂತರಿಸಲಾಗಿತ್ತು. ರೈಲು, ವಿಮಾನವನ್ನು ರದ್ದುಗೊಳಿಸಲಾಗಿತ್ತು. ಸ್ಥಳಾಂತರಗೊಂಡ ಜನರಿಗೆ ಸೂಕ್ತ ಹಣಕಾಸಿನ ನೆರವು ನೀಡುವುದಾಗಿ ಮುಖ್ಯಮಂತ್ರಿ ರೂಪಾನಿ ಹೇಳಿದ್ದಾರೆ.

ನಾಳೆಯಿಂದ ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆಯೆಂದು ತಿಳಿಸಿದ್ದಾರೆ.ಸ್ಥಳಾಂತರಗೊಂಡ ಜನರು ತಮ್ಮ ತಮ್ಮ ನಿವಾಸಕ್ಕೆ ಮರಳಬಹುದೆಂದು ಅಭಯ ನೀಡಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.