ಉತ್ತರ ಪ್ರದೇಶ: ರೈಲ್ವೆ ಹಳಿಯ ದುಸ್ಥಿತಿಯ ಬಗ್ಗೆ ವರದಿ ಮಾಡುತ್ತಿದ್ದ ಪತ್ರಕರ್ತನಿಗೆ ಥಳಿಸಿ, ಅವಾಚ್ಯ ಶಬ್ಧಗಳಿಂದ ಬೈದು ಜೈಲಿಗೆ ಅಟ್ಟಿದ ಘಟನೆ ಉತ್ತರ ಪ್ರದೇಶದ ಶಾಮ್ಲಿಯಿಂದ ವರದಿಯಾಗಿದೆ.

ಯೋಗಿ ಆದಿತ್ಯನಾಥ್ ರನ್ನು ಅವಹೇಳನ ಮಾಡಲಾಗಿದೆಯೆಂದು ಪತ್ರಕರ್ತ ಪ್ರಶಾಂತ್ ರನ್ನು ಬಂಧಿಸಿ ಉತ್ತರ ಪ್ರದೇಶ ಸರಕಾರ ಸರ್ವೊಚ್ಚ ನ್ಯಾಯಾಲಯದಿಂದ ಛೀಮಾರಿ ಪಡೆದ ಬೆನ್ನಲ್ಲೇ ಈ ಘಟನೆ ಘಟಿಸಿದೆ.

“ಅವರು ನನ್ನ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾವನ್ನು ಒಡೆದು ಹಾಕಿದರು. ಜೈಲಿಗೆ ಹಾಕಿ ಬಟ್ಟೆ ಕಳಚಿ ನನ್ನ ಬಾಯಿಯಲ್ಲಿ ಮೂತ್ರ ಮಾಡಿದ್ದಾರೆಂದು ಪತ್ರಕರ್ತ ಅಮಿತ್ ಶರ್ಮಾ ಆರೋಪಿಸಿದ್ದಾರೆ.

ಪತ್ರಕರ್ತರು ಪ್ರತಿಭಟನೆ ನಡೆಸಿದ ನಂತರ ಪೊಲೀಸರು ಬಿಡುಗಡೆ ಮಾಡಿದ್ದು, ಪತ್ರಕರ್ತ ರೈಲ್ವೆ ದುರಾವಸ್ಥೆ ವರದಿ ಮಾಡಿದ ಕಾರಣ ಆತನ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.