ನವದೆಹಲಿ:ಅಮಾನತುಗೊಂಡಿರುವ ಬಿಜೆಪಿ ಶಾಸಕ ಕುಲದೀಪ್ ಸೆನೆಗಾರ್ ನಿಂದ ಅತ್ಯಾಚಾರಗೊಳಗಾಗಿರುವ ಸಂತ್ರಸ್ಥೆಯು ಉನ್ನತ ಮಟ್ಟದ ಬೆದರಿಕೆಯನ್ನು ಎದುರಿಸುತ್ತಿದ್ದಾರೆಂದು ಸಿಬಿಐ ಸಣ್ಣ ಸರ್ವೊಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ವರದಿಯಲ್ಲಿ ಸಂತ್ರಸ್ಥೆಯು “Category A threat perception” ಅಡಿಯಲ್ಲಿ ಬರುತ್ತಾರೆಂದು ಹೇಳಲಾಗಿದೆ. ಇದರರ್ಥ ಸಂತ್ರಸ್ಥೆಯು ದುಷ್ಕರ್ಮಿಗಳಿಂದ ದೊಡ್ಡ ಮಟ್ಟದ ಬೆದರಿಕೆ ಎದುರಿಸುತ್ತಿದ್ದಾರೆಂದು ತಿಳಿದು ಬಂದಿದೆ. ಸಂತ್ರಸ್ಥೆಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ತನಿಖಾ ಸಂಸ್ಥೆ ಉಲ್ಲೇಖಿಸಿದೆ.

ಈ ವರದಿಯ ಆಧಾರದಲ್ಲಿ ರಾಜ್ಯಬಸರಕಾರವು ಸಂತ್ರಸ್ಥೆ ಮತ್ತು ಆಕೆಯ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ನ್ಯಾಯಾಧೀಶರಾದ ಧರ್ಮೇಶ್ ಶರ್ಮಾ ಆದೇಶ ನೀಡಿ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ.

ಬಿಜೆಪಿ ಶಾಸಕ ಕುಲದೀಪ್ 2017 ರಲ್ಲಿ ಸಂತ್ರಸ್ಥೆಯ‌ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪವಿದ್ದು, ನಂತರ ಸಂತ್ರಸ್ಥೆಯನ್ನು ಅಫಘಾತದ ನಾಟಕವಾಡಿ ಕೊಲ್ಲಲು ಯತ್ನಿಸಿದ್ದನು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.