ಬೆಂಗಳೂರು: ರಾಜ್ಯ ಸರ್ಕಾರ ಇಂದು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ. ಮತ್ತು
ದಕ್ಷಿಣ ಕನ್ನಡ ಜಿಲ್ಲೆಗೆ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಇನ್ನು ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ.
ನೂತನ ಉಸ್ತುವಾರಿ ಸಚಿವರ ವಿವರ ಈ ರೀತಿಯಾಗಿದೆ:
ಬಿ.ಎಸ್. ಯಡಿಯೂರಪ್ಪರವರನ್ನು ಬೆಂಗಳೂರು ನಗರ ಜಿಲ್ಲೆಗೆ ಗೋವಿಂದ ಕಾರಜೋಳ ಬಾಗಲಕೋಟೆ/ಕಲಬುರಗಿಗೆ ಡಾ.ಅಶ್ವತ್ಥನಾರಾಯಣರವರನ್ನು ರಾಮನಗರ/ಚಿಕ್ಕಬಳ್ಳಾಪುರ ಜಿಲ್ಲೆಗೆ ನೇಮಕ ಮಾಡಲಾಗಿದೆ ಇನ್ನುಳಿದಂತೆ

ಕೋಟ ಶ್ರೀನಿವಾಸ ಪೂಜಾರಿ

ಲಕ್ಷ್ಮಣ ಸವದಿ – ಬಳ್ಳಾರಿ/ಕೊಪ್ಪಳ, ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ /ದಾವಣಗೆರೆ, ಆರ್.ಅಶೋಕ್ – ಬೆಂಗಳೂರು ಗ್ರಾಮಾಂತರ/ಮಂಡ್ಯ, ವಿ. ಸೋಮಣ್ಣ – ಮೈಸೂರು ಮತ್ತು ಮಡಿಕೇರಿ, ಆರ್. ನಾಗೇಶ್ – ಕೋಲಾರ, ಪ್ರಭು ಚೌವ್ಹಾಣ್ – ಬೀದರ್/ಯಾದಗಿರಿ, ಶ್ರೀರಾಮುಲು- ರಾಯಚೂರು/ಚಿತ್ರದುರ್ಗ, ಸುರೇಶ್ ಕುಮಾರ್ – ಚಾಮರಾಜನಗರ, ಜಗದೀಶ್ ಶೆಟ್ಟರ್ – ಬೆಳಗಾವಿ/ಹುಬ್ಬಳ್ಳಿ /ಧಾರವಾಡ, ಸಿ.ಟಿ.ರವಿ- ಚಿಕ್ಕಮಗಳೂರು, ಜೆ.ಸಿ.ಮಾಧುಸ್ವಾಮಿ -ತುಮಕೂರು/ ಹಾಸನ, ಸಿ.ಸಿ.ಪಾಟೀಲ್ – ಗದಗ/ ವಿಜಯಪುರ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರಾಗಿ ನೇಮಕ ಮಾಡಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.