ಉಡುಪಿ : ವಾಹನ ತಪಾಸಣಾ ನೆಪದಲ್ಲಿ ಸಾರ್ವಜನಿಕರಿಗೆ ಕಿರುಕುಳ, ಪೋಲಿಸರ ವಿರುದ್ಧ ಆಕ್ರೋಶ

1037

ಉಡುಪಿ‌ : ಮೋಟಾರು ವಾಹನ ಕಾಯ್ದೆ ತಿದ್ದುಪಡಿ 2019 ಈಗಾಗಲೇ ಜಾರಿಗೆ ಬಂದಿದ್ದು ದೇಶದಾದ್ಯಂತ ನಾಗರಿಕರಿಂದ ತೀವ್ರ ರೀತಿಯಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು ಜನ ಸಾಮಾನ್ಯರು ಟ್ರಾಫಿಕ್ ಪೋಲಿಸರ ಜೊತೆ ಪ್ರತಿ ನಿತ್ಯ ಜಗಳ ನಡೆಸುವ ಪ್ರಸಂಗಗಳು ನಡೆಯುತ್ತಲಿವೆ.

ಇಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಬಳಿ ಕಾಲೇಜು ಬಿಡುವ ಹೊತ್ತಿನಲ್ಲಿ ಅಡ್ಡರಸ್ತೆಯಲ್ಲಿ ಯಾರಿಗೂ ಗೊತ್ತಾಗದಂತೆ ಜೀಪು ನಿಲ್ಲಿಸಿ ಮಫ್ತಿಯಲ್ಲಿರುವ ಪೋಲೀಸರ ಮೂಲಕ ವಾಹನ ತಪಾಸಣೆ ನೆಪದಲ್ಲಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಉಡುಪಿಯ ಸಾರ್ವಜನಿಕರು ಪೋಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.