ಸಂತೆಕಟ್ಟೆ: ಉಡುಪಿ ಜಿಲ್ಲೆಯ ಹೂಡೆ,ಕೋಡಿಬೆಂಗ್ರೆಯ ಸಮುದ್ರ ಕಿನಾರೆಗೆ ಸುಮಾರು 60 ಕೋಟಿಯ ತಡೆಗೋಡೆ ಯೋಜನೆಯನ್ನು ಸರಕಾರ ಹಮ್ಮಿಕೊಂಡಿದೆ. ಆದರೆ ಈ ಯೋಜನೆಗೆ ಘನ ಗಾತ್ರದ ಕಲ್ಲುಗಳನ್ನು ಸಾಗಿಸುವ ಟಿಪ್ಪರ್ ಗಳು ಮಾತ್ರ ಸ್ಥಳೀಯರ ಪಾಲಿಗೆ ಯಮ ಕಂಟಕವಾಗಿ ಗೋಚರಿಸಿದೆ.

ಕಳೆದ ಹಲವು ತಿಂಗಳಿಂದ ಟಿಪ್ಪರ್ ಗಳು ಯಾವುದೇ ಜಾಗೃತಿ ಸೂತ್ರಗಳನ್ನು ಅನುಸರಿಸದೆ ಘನ ಗಾತ್ರದ ಕಲ್ಲುಗಳನ್ನು ಹೊತ್ತು ಬೇಜವಾಬ್ದಾರಿಯಿಂದ ಸಂತೆಕಟ್ಟೆ ಹೂಡೆ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಗುಜ್ಜರ್ ಬೆಟ್ಟಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ವೆಯಿಂಗ್ ಮಿಷಿನನ್ನು ನಿರ್ಮಿಸಲಾಗಿದ್ದು ಟಿಪ್ಪರ್ ಗಳನ್ನು ರಾತ್ರಿ ಹೊತ್ತು ಯಾವುದೇ ಸಿಗ್ನಲ್ ನೀಡದೆ ಮುಖ್ಯ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾಗುತ್ತಿದೆ. ಈ ಮುಂಚೆ ಅದೇ ಸ್ಥಳದಲ್ಲಿ ಇವರ ಬೇಜಾಬ್ದಾರಿಗೆ ಕತ್ತಲಲ್ಲಿ ನಿಲ್ಲಿಸಿದ ಟಿಪ್ಪರ್ ಗೆ ಬೈಕ್ ಬಡಿದ ಪರಿಣಾಮ ಗುಜ್ಜರ್ ಬೆಟ್ಟಿನ ನಿವಾಸಿಯೊಬ್ಬರು ಮೃತರಾಗಿದ್ದರು. ಅದಕ್ಕಿಂತ ಮೊದಲು ಟಿಪ್ಪರ್ ನಿಂದ ಘನ ಗಾತ್ರದ ಕಲ್ಲು ಸಂಚರಿಸುತ್ತಿರುವ ಸಂದರ್ಭದಲ್ಲಿ ಬಿದ್ದ ಉದಾಹರಣೆ ಕೂಡ ಇದೆ.

ಕಲ್ಲು ಬಿದ್ದು ಆ ಕಲ್ಲಿಗೆ ಕಾರು ತಗುಲಿ ಅಫಘಾತವಾದ ಸನ್ನಿವೇಶ ಕೂಡ ಏರ್ಪಟ್ಟಿದೆ. ಇದೀಗ ಟಿಪ್ಪರೊಂದು ಕೆಮ್ಮಣ್ಣು ಗುಜ್ಜರ್ ಬೆಟ್ಟು ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದೆ. ಆದರೂ ಸಂಬಂಧ ಪಟ್ಟ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದು ಈಗಲಾದರೂ ಕಲ್ಲುಗಳನ್ನು ಸಾಗಿಸುವಾಗ ಅಗತ್ಯ ನಿಯಮಗಳನ್ನು ಪಾಲಿಸಿ ಕಲ್ಲುಗಳನ್ನು ಸುರಕ್ಷಾ ಕ್ರಮಗಳೊಂದಿಗೆ ಸಾಗಿಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.