ಉಡುಪಿ : ಉಡುಪಿಯ ಸಮಾನ ಮನಸ್ಕ ಯುವಕರಿಂದ ಅಜ್ಜಾರಕಾಡು ಬಳಿಯಿರುವ ಹುತಾತ್ಮ ಸೈನಿಕರ ಸ್ಮಾರಕದ ಬಳಿ ಆತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಕಠಿಣ ಶಿಕ್ಷೆ ನೀಡುವಂತೆ ಕಾನೂನು ರೂಪಿಸಬೇಕೆಂದು ಇಂದು ಮೌನ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಪ್ರಮೋದ್ ಉಚ್ಚಿಲ್, ಹಮ್ಮದ್ ಉಡುಪಿ, ಶಾಹೀದ್ ರಝಾ ಉಡುಪಿ, ಹಬೀಬ್ ಗೋಳಿಕಟ್ಟೆ, ಮಾಧವ, ಯಾದವ ಕಾಪು, ಯಾಸೀನ್ ಉಡುಪಿ, ಹಮ್ರಾಜ್ ಕಾಪು, ಸುರೇಂದ್ರ ಉಡುಪಿ, ದಂಡತಿರ್ಥದ ವಿಧ್ಯಾರ್ಥಿಗಳು, ಒಳಕಾಡು ಶಾಲೆಯ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.