ಉಡುಪಿ: ಪಾಪ್ಯುಲರ್ ಫ್ರಂಟ್ ಸಂಸ್ಥಾಪನ ದಿನದ ಅಂಗವಾಗಿ ಫೆ 17 2014 ರಂದು ಉಡುಪಿಯಲ್ಲಿ ಆಯೋಜಿಸಿದ್ದ ಯುನಿಟಿ ಮಾರ್ಚ್ (ಕಾರ್ಯಕರ ಪಥಸಂಚಲನ) ಅನ್ನು ಅನುಮತಿ ಪಡೆಯದೆ ನಡೆಸಲಾಗಿತ್ತು ಎಂದು ಉಡುಪಿ ನಗರ ಪೊಲೀಸರು ಆರೋಪಿಸಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ 1ನೇ ಹೆಚ್ಚುವರಿ ಪ್ರಥಮ ದರ್ಜೆಯ ನ್ಯಾಯ ದಂಡಾಧಿಕಾರಿಯವರು ಪ್ರಕರಣದ ವಿಚಾರಣೆ ನಡೆಸಿ, ಪೊಲೀಸರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತೀರ್ಪು ನೀಡಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಉಡುಪಿ ಜಿಲ್ಲಾ ನಾಯಕರನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಜಿಲ್ಲಾ ನಾಯಕರ ಪರವಾಗಿ ವಕೀಲರಾದ ಆಸೀಫ್ ಬೈಕಾಡಿ ಮತ್ತು ಅಬುಬಕ್ಕರ್ ಸಿದ್ದಿಕ್ ರವರು ವಾದಿಸಿದ್ದರು.ಜಿಲ್ಲಾ ಪ್ರದಾನ ಕಾರ್ಯದರ್ಶಿ ಫಯಾಜ್ ಮಲ್ಪೆ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.