ಉಡುಪಿ : ರಾಷ್ಟ್ರೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ (ಮುಸ್ಲಿಮ್, ಕ್ರೈಸ್ತ, ಜೈನ, ಬುದ್ದ, ಸಿಖ್, ಪಾರ್ಸಿ) ವಿದ್ಯಾರ್ಥಿನಿಯರಿಗೆ ಬೇಗಂ ಹಝ್ರತ್ ಮಹಲ್ (ಮೌಲಾನಾ ಆಝಾದ್) ರಾಷ್ಟ್ರೀಯ ವಿಧ್ಯಾರ್ಥಿ ವೇತನಕ್ಕಾಗಿ 9 ರಿಂದ 12 ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದ್ದು , ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಸೆಪ್ಟೆಂಬರ್ 30 ಆಗಿದ್ದು ಅದರ ಓಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಈ ವಿದ್ಯಾರ್ಥಿವೇತನವು ಕೇವಲ ವಿದ್ಯಾರ್ಥಿನಿಯರಿಗೆ ಮಾತ್ರವಾಗಿದ್ದು, ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಳೆದ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಸೇ. 50% ಅಂಕ ಗಳಿಸಿರಬೇಕು ಮತ್ತು ಪೋಷಕರ ಆದಾಯದ ಮಿತಿ 2 ಲಕ್ಷ ಮೀರಿರಬಾರದು. ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕ ತಕ್ಕದ್ದು ಮತ್ತು ಕಳೆದ ವರ್ಷದ ಹಾಗೆ ಯಾವುದೇ ಡಾಕ್ಯುಮೆಂಟ್ಗಳನ್ನು ಪೋಸ್ಟ್ ಮೂಲಕ ಅವಶ್ಯಕತೆ ಇಲ್ಲ.

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
● ಶಾಲೆಯ / ಕಾಲೇಜು ಪರಿಶೀಲನ ( Verification form) ಪತ್ರ  ●ಜಾತಿ ಮತ್ತು ಆದಾಯ ಪ್ರಮಾಣ ಪತ್ರ
●ಹಿಂದಿನ ತರಗತಿಯ ಅಂಕಪಟ್ಟಿ ●ಆಧಾರ್ ಕಾರ್ಡ್ ●ಬ್ಯಾಂಕ್ ಪಾಸ್‍ಬುಕ್ ●ಕಾಲೇಜು/ಸ್ಕೂಲ್ ಡಯಸ್ ಕೋಡ್
●ವಿದ್ಯಾರ್ಥಿನಿಯ ಭಾವ ಚಿತ್ರ ●ಫೀಸ್ ರಿಸಿಪ್ಟ್ ( Fee receipt)

ಆನ್ ಲೈನ್ ಅರ್ಜಿ ಸಲ್ಲಿಸಲು ಸಂಪರ್ಕಿಸಿ
ಉಡುಪಿ ಜನಸೇವಾ
1st Flood, Raaj Tower Near City Bus Stand, Udupi
Mob – 8050801021

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.