ಉಡುಪಿ : ಕಟ್ಟಡ ಕಾರ್ಮಿಕರ ಧರಣಿ ಇದೇ ಸೋಮವಾರ ಸೆ.23 ರಿಂದ ಆರಂಭಿಸಲು ನಿರ್ಧರಿಸಿದೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸೆಪ್ಟಂಬರ್ 20ರಂದು ಆರಂಭವಾಗುತ್ತದೆ ಎಂಬ ಶಾಸಕರ ಹೇಳಿಕೆ ಹುಸಿಯಾಗಿದೆ. ಉದ್ಯೋಗವಿಲ್ಲದೇ ಸಾಕಷ್ಟು ಕಷ್ಟ-ನಷ್ಟಕ್ಕೆ ಒಳಗಾದ ಜಿಲ್ಲೆಯ ಕಟ್ಟಡ ಕಾರ್ಮಿಕರು ಶೀಘ್ರವಾಗಿ ಮರಳು ಸಮಸ್ಯೆ ಕಾಲಹರಣ ಮಾಡದೇ ತಮ್ಮ ಸರಕಾರದ ಮೂಲಕ ಬಗೆಹರಿಸಬೇಕೆಂದು ಕಟ್ಟಡ ಕಾರ್ಮಿಕರಿಗೆ ಸರಕಾರ ಪರಿಹಾರ ಧನ ಒದಗಿಸಬೇಕೆಂದು ಸೆ.23ರಿಂದ ಮರಳು ತೆಗೆಯಲು ನದಿಗಿಳಿಯುವ ತನಕ ಧರಣಿ ನಡೆಸಲು ಮೂರು ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ತೀರ್ಮಾನಿಸಿದೆ. ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿದಿನ ಹೋರಾಟ ನಡೆಯಲಿದ್ದು ಜಿಲ್ಲೆಯ ಕಟ್ಟಡ ಕಾರ್ಮಿಕರ ಪ್ರತಿದಿನವೂ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ಕುಂದಾಪುರದ ಸೇರಿದಂತೆ ಜಿಲ್ಲೆಯ ನಾನ್ ಸಿಆರ್ ಝಡ್ ನಲ್ಲೂ ತಕ್ಷಣ ಮರಳುಗಾರಿಕೆ ಆರಂಭಿಸಬೇಕೆಂದು ಸಮಿತಿಯು ಆಗ್ರಹಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.