ವರದಿ : ಶಫೀ ಉಚ್ಚಿಲ

ಉಚ್ಚಿಲ : ಬೆಳಗ್ಗಿನ ಜಾವ ಸುರಿದ ಭಾರೀ ಗಾಳಿ ಮಳೆಗೆ ಇಲ್ಲಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿಂಗೇರಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು,ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ಕಟ್ಟಿಂಗೇರಿ ರಸ್ತೆಯ ಹರಿಶ್ಚಂದ್ರ ಎಂಬವರ ಮನೆಯ ಪಕ್ಕದಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳುವ ಸ್ಥಿತಿಯಲ್ಲಿದ್ದು,ಮಂಗಳವಾರ ಬೆಳಗ್ಗಿನ ಜಾವ 5:00 ಗಂಟೆಯ ಸುಮಾರಿಗೆ ಗಾಳಿಯ ರಭಸಕ್ಕೆ ಒಮ್ಮೆಲೆ ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ರಸ್ತೆಗೆ ಉರುಳಿದ್ದು,ಘಟನೆಯಿಂದ ವಿದ್ಯುತ್ ಕಂಬ,ತಂತಿಗಳು ಮುರಿದು ಬಿದ್ದು ಹಾನಿಯಾಗಿದೆ.
ಮೂರು ವಿದ್ಯುತ್ ಕಂಬಗಳು ಬಾಗಿ ನಿಂತಿದೆ.ಮುಂಜಾನೆ ಮಸೀದಿಗೆ ಹೋಗಿ ಮನೆಯತ್ತ ಬರುತ್ತಿದ್ದ ಸ್ಥಳೀಯ ಮನ್ಸೂರು ಎಂಬವರು ಕೂಡಲೇ ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮಾಹಿತಿ ನೀಡಿದ್ದಾರೆ.
ಮೆಸ್ಕಾಂ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ವಿದ್ಯುತ್ ಅವಘಡ ತಪ್ಪಿದೆ.ಪಕ್ಕದಲ್ಲೇ ಅಂಗನವಾಡಿ ಮತ್ತು ಮನೆಯೊಂದಿದ್ದು ಯಾವುದೇ ಹಾನಿ ಸಂಭವಿಸಿಲ್ಲ.ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಚಾರಿಗಳು ವಾಹನವನ್ನು ಮುಂದೆ ಸಾಗಿಸಲಾಗದೆ ತೊಂದರೆ ಅನುಭವಿಸುವಂತಾಯಿತು.

ಯಾರೂ ಕೂಡ ಕ್ರಮಕೈಗೊಂಡಿಲ್ಲ:

ಮರ ಬೀಳುವ ಸ್ಥಿತಿಯಲ್ಲಿದ್ದು,ಮುಂಜಾಗ್ರತಾ ಕ್ರಮವಾಗಿ ನಾವು ಹಲವಾರು ಬಾರಿ ಸಂಬಂದಪಟ್ಟವರ ಗಮನಕ್ಕೆ ತಂದಿದ್ದೇವೆ.ಯಾರೂ ಕೂಡ ಈ ಬಗ್ಗೆ ಕ್ರಮಕೈಗೊಂಡಿಲ್ಲ.ಮರ ತಿರುಗಿ ಮನೆಯ ಮೇಲೆ ಬೀಳುತ್ತಿದ್ದರೆ ಬಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಮನೆ ಮಾಲಿಕ ಹರಿಶ್ಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.