ತುಮಕೂರು : ಕಳೆದ ವಾರ ಇಲ್ಲಿನ ಸತ್ಯಮಂಗಲದ ಕೈಗಾರಿಕಾ ಪ್ರದೇಶದಲ್ಲಿ ಮೆಡಿಸಿನ್ ರಿಯಾಕ್ಟರ್ ಸ್ಫೋಟಗೊಂಡಿತ್ತು. ಈ ಘಟಕದಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆಯಾ ಎಂದು ತಿಳಿಯಲು ಹೋಗಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ. ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ಸಿಬ್ಬಂದಿ ಮಾಧ್ಯಮದವರ ಮೇಲೆ ದರ್ಪ ತೋರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೇಳೂರು ಬಾಯ್ಲರ್ ನ ಎಚ್.ಆರ್ ಮ್ಯಾನೇಜರ್ ವೆಂಕಟರಮಣ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಜೂನ್ ಮೊದಲ ವಾರದಲ್ಲಿ ಬೇಳೂರು ಬಾಯರ್ ಮೆಡಿಸಿನ್ ಕಂಪನಿಯ ರಿಯಾಕ್ಟರ್ ಸ್ಫೋಟಗೊಂಡು ಸ್ಥಳೀಯರ ಮನೆಗಳಿಗೆ ಹಾನಿಯುಂಟಾಗಿ ಹಲವರಿಗೆ ಗಾಯವಾಗಿತ್ತು.

ಈ ಹಿನ್ನೆಲೆಯಲ್ಲಿ ಇಲ್ಲಿಯ ಕೈಗಾರಿಕಾ ಪ್ರದೇಶದಿಂದ ಸ್ಥಳೀಯರಿಗೆ ಉಂಟಾಗುತಿದ್ದ ತೊಂದರೆ ಕುರಿತು ಮಾಧ್ಯಮದವರು ವರದಿ ಮಾಡಲು ತೆರಳಿದ್ದರು. ಯಾರು ಕೂಡ ಫ್ಯಾಕ್ಟರಿಗಳ ಒಳಪ್ರವೇಶ ಮಾಡದೇ ಸಾರ್ವಜನಿಕ ರಸ್ತೆಯಲ್ಲೇ ನಿಂತು ಕಾರ್ಖಾನೆಯ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.