ತ್ರಿಪುರಾದಲ್ಲಿ ನಾವು ಗೋಮಾಂಸ ನಿಷೇಧಿಸುದಿಲ್ಲ – ಸುನಿಲ್ ದೇವ್‌ಧರ್ ಬಿಜೆಪಿ ನಾಯಕ ಹೇಳಿಕೆ

ನವದೆಹಲಿ: ‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗೋಮಾಂಸ ಸೇವನೆಗೆ ವಿರುದ್ಧವಾಗಿದ್ದರೆ ಅದನ್ನು ನಿಷೇಧಿಸುವ ಸಾಧ್ಯತೆ ಇದೆ. ಆದರೆ, ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನವರು ಗೋಮಾಂಸ ಸೇವನೆ ಮಾಡುವುದರಿಂದ ಸರ್ಕಾರ ಅಲ್ಲಿ ಗೋಮಾಂಸ ನಿಷೇಧಿಸದು’ ಎಂದು ಸುನಿಲ್ ಹೇಳಿದ್ದಾರೆ.

‘ಈಶಾನ್ಯ ರಾಜ್ಯಗಳಲ್ಲಿ ಕ್ರೈಸ್ತರು, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ವಲ್ಪ ಮಟ್ಟಿಗೆ ಹಿಂದೂಗಳೂ ಇದ್ದು, ಅವರೂ ಮಾಂಸ ಸೇವನೆ ಮಾಡುತ್ತಾರೆ. ಹೀಗಾಗಿ ಇಲ್ಲಿ ಗೋಮಾಂಸ ನಿಷೇಧಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತ್ರಿಪುರಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸುನಿಲ್ ಅವರು ಬಿಜೆಪಿಯ ಉಸ್ತುವಾರಿ ವಹಿಸಿಕೊಂಡಿದ್ದರು.