ಕುಂದಾಪುರದಲ್ಲಿ ಮೊದಲ ತ್ರಿಪಲ್ ತಲಾಕ್ ಪ್ರಕರಣ ದಾಖಲು!

643

ಕುಂದಾಪುರ: ಪತಿ ತನ್ನ ವಿರುದ್ಧ ತ್ರಿಪಲ್ ತಲಾಕ್ ಆಧಾರದಲ್ಲಿ ವಿಚ್ಚೇದನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಕುಂದಾಪುರ ನಗರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ಇತ್ತೀಚಿಗೆ ತ್ರಿಪಲ್ ತಲಾಕ್ ಕಾಯಿದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿತ್ತು.

ಉಡುಪಿ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಮೊದಲ ಪ್ರಕರಣವಾಗಿದ್ದು ಅಲ್ಫೀಯಾ ಅಖ್ತರ್ (29) ಎಂಬುವವರು ತನ್ನ ಪತಿ ಹಿರಿಯಡ್ಕ ನಿವಾಸಿ ಹನೀಫ್ ಸಯ್ಯದ್ (32) ಮತ್ತು ಆತನ ತಂದೆ,ತಾಯಿ ತಂಗಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ಥೆ ಅಲ್ಫೀಯಾ ಹೇಳುವ ಪ್ರಕಾರ, ಗಂಡ ತನಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ ನಾಲ್ಕು ಲಕ್ಷ ವರದಕ್ಷಿಣೆ ಬೇಡಿಕೆ ಇಟ್ಟಿದ್ದರು. ಆದರೆ ನಾವು ಎರಡು ಲಕ್ಷ ನೀಡಿದ್ದೇವೆ. ಉಳಿದ ಹಣಕ್ಕಾಗಿ ಪೀಡಿಸುತ್ತಿದ್ದ ಕೊಡಲು ಸಾಧ್ಯವಾದಾಗ ತ್ರಿಪಲ್ ತಲಾಕ್ ನೀಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ವರದಕ್ಷಿಣೆ ಪೀಡನೆ ಕಾಯಿದೆ ಮತ್ತು ತ್ರಿಪಲ್ ತಲಾಕ್ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.