ಕೊಯಮತ್ತೂರು: ಶ್ರೀಲಂಕಾದಲ್ಲಿ ನಡೆದ ಈಸ್ಟರ್ ದಾಳಿಯ ಮಾಸ್ಟರ್ ಮೈಂಡ್ ಝರನ್ ಹಾಶೀಮ್ ನೊಂದಿಗೆ ಫೇಸ್ ಬುಕ್ ನಲ್ಲಿ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಶೇಖ್ ಹಿದಾಯತುಲ್ಲಾ (38) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಹಿದಾಯತುಲ್ಲಾನನ್ನು ಬಂಧಿಸುವ ಮುನ್ನ ಎರಡು ದಿನ ಮುನ್ನ ಇನ್ನಿತರ ನಾಲ್ಕು ಮಂದಿಯನ್ನು ಎನ್.ಐ.ಎ ವಶಕ್ಕೆ ಪಡೆದುಕೊಂಡಿದೆ. ಹಿದಾಯತುಲ್ಲಾ ಸಿಮಿಯ ಮಾಜಿ ಸದಸ್ಯನಾಗಿದ್ದ ಎಂದು ತಿಳಿದು ಬಂದಿದೆ. ಎನ್.ಐ.ರ ಐಸ್ ಸಿದ್ಧಾಂತವನ್ನು ಪ್ರಚಾರ ಮಾಡುವ ಆರೋಪದಲ್ಲಿ ಆರು ಮಂದಿಯ ಮೇಲೆ ಪ್ರಕರಣ ದಾಖಲಿಸಿತ್ತು. ಕೇರಳ ಮತ್ತು ತಮಿಳುನಾಡಿನಲ್ಲಿ ಐ.ಎಸ್ ಸಿದ್ದಾಂತ ಹರಡುವಿಕೆ ಮತ್ತು ದಾಳಿಯ ಹುನ್ನಾರದ ಆರೋಪ ಹೊರಿಸಲಾಗಿದೆ.

ಜೂನ್ 12 ಕ್ಕೆ ಆರೋಪಿಗಳ ಮನೆಯಿಂದ ಕೆಲವು ಪುಸ್ತಕಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ತಿಳಿಸಿರುವ ಎನ್.ಐ.ಎ, ಬಂಧಿತ ಆರೋಪಿಗಳು ಶ್ರೀಲಂಕಾದ ಭಯೋತ್ಪಾದಕ ಹಾಶೀಮ್ ನೊಂದಿಗೆ ಸಮಾಜಿಕ ಜಾಲಾತಾಣದಲ್ಲಿ ಸಂಬಂಧ ಹೊಂದಿದ್ದಾರೆಂದು ಆರೋಪಿಸಿದೆ.

ಹಿದಾಯತುಲ್ಲಾನನ್ನು ಎನ್.ಐ.ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಮೂವರ ಬಂಧನ:

ಶುಕ್ರವಾರ ಕೊಯಮತ್ತೂರು ಪೊಲೀಸರು ಮೂವರನ್ನು ಬಂಧಿಸಿದ್ದು, ಬಂಧಿತರು ಮುಹಮ್ಮದ್ ಹುಸೈನ್, ಎ.ಶಹಜಾನ್ ಮತ್ತು ಶೇಖ್ ಸೈಫುಲ್ಲಾ ಎಂದು ವರದಿಯಾಗಿದೆ. ಇವರನ್ನು UAPA ಕಾಯಿದೆಯ 18, 38,39 ಕಲಂಗಳಡಿಯಲ್ಲಿ ಬಂಧಿಸಲಾಗಿದೆ.

ಬಂಧಿತರು ಈಸ್ಟರ್ ದಾಳಿಯನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದು, ಝರನ್ ಹಾಶೀಮ್ ನ ಬೆಂಬಲಿಗರೆಂಬ ಆರೋಪ ಎನ್.ಐ.ಎ ಮಾಡಿದೆ.

ಸಂಘಟನೆಗಳಿಂದ ಕಮಿಷನರ್ ಭೇಟಿ:

ಮುಸ್ಲಿಮ್ ಸಂಘಟನೆಗಳು ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಗುರಿಯನ್ನಾಗಿಸಿ ಸುಳ್ಳಾರೋಪದಲ್ಲಿ ಅಮಾಯಕ ಮುಸ್ಲಿಮ್ ಯುವಕರನ್ನು ಬಂಧಿಸಲಾಗುತ್ತಿದೆಯೆಂದು ಆರೋಪಿಸಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರನ್ನು ಭೇಟಿಯಾಗಿ ಜಮಾಅತೆ ಇಸ್ಲಾಮಿ ಹಿಂದ್, ಪಿ.ಎಫ್ ಐ ಮತ್ತು ತಮಿಳುನಾಡು ಮುಸ್ಲಿಂ ಮುನ್ನೇತರ ಕಝ್ಗಮ್ ಸಂಘಟನೆಗಳು ಮನವಿ ಸಲ್ಲಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.