ರುಚಿಕರ ತಂದೂರಿ ಚಿಕನ್‌ ರೆಸಿಪಿ

194

ತಂದೂರಿ ಚಿಕನ್‌ ಅನ್ನು ಈಗಿನ ಕಾಲದಲ್ಲಿ ಎಲ್ಲರೂ ಇಷ್ಟಪಡುತ್ತಿದ್ದಾರೆ.ಆಗಾಗ ರೆಸ್ಟೋರೆಂಟ್ ಗಳಲ್ಲಿ ತಂದೂರಿ ಚಿಕನ್ ತಿನ್ನುವುದಕಿಂತ ಮನೆಯಲ್ಲೇ ಗ್ರಿಲ್ಡ್ ತವಾ ಬಳಸಿ ನೀವೇ ಮಾಡಿ ತಿನ್ನಬಹುದಾಗಿದೆ.

ತಂದೂರಿ ಚಿಕನ್ ಗೆ ಬೇಕಾಗುವ ಸಾಮಗ್ರಿಗಳು:

1 ಈರುಳ್ಳಿ
6 ಬೆಳ್ಳುಳ್ಳಿ ಎಸಳುಗಳು
3 ಚಮಚ ಮೊಸರು
6 ಚಮಚ ಅಡುಗೆ ಎಣ್ಣೆ
1 ಚಮಚ ಸಾಸಿವೆ
1 ಚಮಚ ಕೊತ್ತಂಬರಿ ಪುಡಿ
1 ಚಮಚ ಕಸೂರಿ ಮೇತಿ ಪುಡಿ
1 ಚಮಚ ಕಾಳು ಮೆಣಸಿನಪುಡಿ
ರುಚಿಗೆ ತಕ್ಕ ಉಪ್ಪು
2 ಚಮಚ ಕಡಲೆ ಹಿಟ್ಟು
2 ಚಮಚ ನಿಂಬೆ ರಸ
1 ಚಮಚ ಜೀರಿಗೆ ಪುಡಿ
1 ಚಮಚ ಗರಂ ಮಸಾಲ ಪುಡಿ
ಚಿಟಿಕೆಯಷ್ಟು ಅರಶಿಣ

ತಂದೂರಿ ಚಿಕನ್ ಮಾಡುವ ವಿಧಾನ

ಮೊದಲಿಗೆ ದೊಡ್ಡದಾಗಿ ಕತ್ತರಿಸಿದ ಚಿಕೆನ್ ಪೀಸ್ ಅನ್ನು ಚೆನ್ನಾಗಿ ತೊಳೆದು ಬದಿಗಿಡಿ.ಈಗ ಮಿಕ್ಸರ್ ಜಾರ್ ತೆಗೆದುಕೊಂಡು ಮೇಲೆ ಹೇಳಿರುವ ಎಲ್ಲ ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.ಈಗ ಮಸಾಲೆಯನ್ನು ಚಿಕೆನ್ ಗೆ ಚೆನ್ನಾಗಿ ಮಿಶ್ರಮಾಡಿ 4 ಗಂಟೆ ಫ್ರಿಜ್ನಲ್ಲಿಡಿ. ಗ್ರಿಲ್ಡ್‌ ತವಾ ಬಿಸಿ ಮಾಡಿ ನಂತರ ಚಿಕನ್ ಮೇಲೆ ಎಣ್ಣೆ ಸವರಿ ಒಂದು ಬದಿ ಹತ್ತು ನಿಮಿಷ ಬಿಸಿ ಮಾಡಿದ ಬಳಿಕ ಮತ್ತೊಮ್ಮೆ ಎಣ್ಣೆ ಸವರಿ ಮತ್ತೊಂದು ಬದಿ 10 ನಿಮಿಷ ಗ್ರಿಲ್ಡ್ ಮಾಡಿ ನಂತರ ನಿಂಬೆಹಣ್ಣಿನ ಪೀಸ್‌ ಮತ್ತು ಕತ್ತರಿಸಿದ ಈರುಳ್ಳಿ ಜೊತೆ ಬಿಸಿ ಬಿಸಿ ಸವಿಯಿರಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.