ಉಡುಪಿ: ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬ್ರಹ್ಮಾವರ ವಲಯ ಹಾಗೂ ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆ ಇವರುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾ ಕೂಟ ನಾಳೆ ದಿನಾಂಕ 01-10-2019 ರ ಮಂಗಳವಾರ ಬೆಳಿಗ್ಗೆ 9-30 ಗಂಟೆಗೆ ಸರಕಾರಿ ಪ್ರೌಢ ಶಾಲಾ ಕ್ರೀಡಾಂಗಣ ಕೆಮ್ಮಣ್ಣಿನಲ್ಲಿ ಜರುಗಲಿದೆ.

ಈ ಕ್ರೀಡಾ ಕೂಟವನ್ನು ಮಾನ್ಯ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಕ್ಷೇತ್ರ ಶಾಸಕರಾದ ಮಾನ್ಯ ಶ್ರೀ ರಘುಪತಿ ಭಟ್ ವಹಿಸಲಿದ್ದಾರೆ, ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಾನ್ಯ ಶ್ರೀ ದಿನಕರ ಬಾಬು ,ಸಂಸದರಾದ ಶ್ರೀ ಓಸ್ಕರ್ ಫೆರ್ನಾಂಡೀಸ್, ಶೋಭ ಕರಾಂದ್ಲಾಜೆ, ಶಾಸಕರಾದ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ ,ಶ್ರೀ ಲಾಲಾಜಿ ಮೆಮ್ಡನ್, ಶ್ರೀ ಆಯೂನೂರ್ ಮಂಜುನಾಥ, ಶ್ರೀ ಭೋಜೆಗೌಡ, ಡಾ!! ತೇಜಸ್ವಿನಿ ರಮೇಶ ಗೌಡ, ಹಾಗೂ ತಾಲೂಕು ಪಂಚಾಯತ್ , ಜಿಲ್ಲಾ ಪಂಚಾಯತ್ ಸದಸ್ಯರುಗಳು ಭಾಗವಹಿಸಲಿದ್ದಾರೆ, ಮಧ್ಯಹ್ನ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.