ರಾಜ್ಯ ಸರ್ಕಾರದ ಶಿಕ್ಷಕರ ವರ್ಗಾವಣೆ ನೀತಿ ವಿರುದ್ಧ ಪ್ರತಿಭಟನೆ: ಪರಿಹಾರದ ಭರವಸೆ ನೀಡಿದ ಸಚಿವ ಸುರೇಶ್ ಕುಮಾರ್

94

ಬೆಂಗಳೂರು: ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ರಾಜ್ಯದ ಸರ್ಕಾರದ ಹೊಸ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ಬಸವೇಶ್ವರ ನಗರದಲ್ಲಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ಸಮಸ್ಯೆಗೆ ಪರಿಹಾರ ಹುಡುಕುವ ಭರವಸೆ
ಯನ್ನು ಶಿಕ್ಷಕರಿಗೆ ನೀಡಿದರು.

ಸರ್ಕಾರದ ಹೊಸ ನೀತಿಯಲ್ಲಿ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ನೀತಿಯನ್ನು ಕೈಬಿಡಬೇಕೆಂಬುದು ಶಿಕ್ಷಕರ ಆಗ್ರಹವಾಗಿದೆ. ಅಲ್ಲದೇ, ಪತಿ ಮತ್ತು ಪತ್ನಿ ಇಬ್ಬರೂ ಶಿಕ್ಷಕರಾಗಿದ್ದರೆ ಅವರಿಗೆ ವರ್ಗಾವಣೆ ಇಲ್ಲ. ಆದರೆ, ಒಬ್ಬರು ಮಾತ್ರ ಶಿಕ್ಷಕರಾಗಿದ್ದರೆ ಅವರಿಗೆ ವರ್ಗಾವಣೆ ಕಡ್ಡಾಯಗೊಳಿಸಲಾಗಿದೆ ಎಂದು ಹೊಸ ನಿಯಮ ಜಾರಿಗೆ ತರಲಾಗಿದೆ.

ಈ ನೀತಿಯ ಬಗ್ಗೆ ಶಿಕ್ಷಕರು ಸುರೇಶ ಕುಮಾರ್
ನಿವಾಸದ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಯುತ್ತಿರುವಂತೆಯೇ ತಮ್ಮ ನಿವಾಸದಿಂದ ಹೊರ ಬಂದ ಸಚಿವ ಸುರೇಶ್ ಕುಮಾರ್, ಶಿಕ್ಷಕರ ಅಹವಾಲುಗಳನ್ನು ಸ್ವೀಕರಿಸಿದರು. ಶಿಕ್ಷಕರ ವರ್ಗಾವಣೆ ತಕರಾರುಗಳನ್ನು ಇತ್ಯರ್ಥಪಡಿಸುವ ಆಶ್ವಾಸನೆ ನೀಡಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.