ಸುರತ್ಕಲ್: ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿನಿ ಮೃತ್ಯು

0
62

ಮಂಗಳೂರು : ಸುರತ್ಕಲ್ ಎನ್.ಐ ಟಿ ಕೆ ಯ ಬೀಚ್ ನಲ್ಲಿ ಆಟವಾಡಲು ತೆರಳಿದ್ದ ವಿದ್ಯಾರ್ಥಿನಿಯೋರ್ವಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.ಈಕೆ ಮಧ್ಯಪ್ರದೇಶದ ಸಾಗರ್ ನಿವಾಸಿ,ನಿರ್ಮಲಾ ದಂಗವಾಲ್ (25)ಎಂದು ಗುರುತಿಸಲಾಗಿದೆ.

ಸುರತ್ಕಲ್ ಎನ್.ಐ .ಟಿ ಕೆ ಯಲ್ಲಿ ನಡೆದಿದ್ದ ಆಲ್ ಇಂಡಿಯಾ ಇ೦ಟರ್ ಎನ್.ಐ.ಟಿ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮದಲ್ಲಿ ದೇಶದ ಬೇರೆ ಬೇರೆ ಎನ್.ಐ ಟಿ ವಿದ್ಯಾರ್ಥಿಗಳು ಆಗಮಿಸಿದ್ದು ಎನ್.ಐ ಟಿ ವಾರಗ೦ಲ್ ನ ತಂಡದ ಸುಮಾರು 23 ವಿದ್ಯಾರ್ಥಿಗಳು ಎನ್.ಐ.ಟಿ ಸ್ಪೋರ್ಟ್ಸ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕ್ರೀಡಾಕೂಟ ಮುಗಿದ ಬಳಿಕ ವಿದ್ಯಾರ್ಥಿಗಳ ತಂಡವನ್ನು ಎನ್.ಐ ಟಿ ವಾರಗ೦ಲ್ ನ ದೈಹಿಕ ಶಿಕ್ಷಕ ರಾಜು ಒಡೆಲಾ ಅವರು ಬೀಚ್ ಗೆ ಕರೆದುಕೊಂಡು ಹೋಗಿದ್ದು ವಿದ್ಯಾರ್ಥಿಗಳೆಲ್ಲರೂ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ನಿರ್ಮಾಲ, ಮೇಘನಾ, ಕನೋಜ್ ಎಂಬ ಮೂವರು ವಿದ್ಯಾರ್ಥಿಗಳು ಸಮುದ್ರದ ಅಲೆಗಳ ರಭಸಕ್ಕೆ ಸಿಲುಕಿ ಮುಳುಗುತ್ತಿದ್ದಾಗ, ಇತರೆ ವಿದ್ಯಾರ್ಥಿಗಳು ಸಹಾಯಕ್ಕೆ ಕೂಗಿದ್ದು ಸ್ಥಳೀಯ ರಕ್ಷಣಾ ಕಾರ್ಯಕರ್ತರು ಮುಳುಗುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ.

ಆದರೆ ಈ ಪೈಕಿ ಮೂವರು ವಿದ್ಯಾರ್ಥಿನಿಯರಲ್ಲಿ ನಿರ್ಮಲಾ ದಂಗವಾಲ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here