ಲೋಕಸಭಾ ಚುನಾವಣೆ 2019 – ಈ ವಾರದಲ್ಲಿ ರಾಜಕಾರಣಿಗಳು ಹೇಳಿದ ಸುಳ್ಳುಗಳ ಪರ್ದಾ ಫಾಶ್ !

459

ಕೊಸ್ಟಲ್ ಮಿರರ್ ಸ್ಪೆಷಲ್: ಲೋಕಸಭಾ ಚುನಾವಣೆ ಈಗಾಗಲೇ ಆರಂಭವಾಗಿದ್ದು ಹಲವಾರು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಮುಗಿದಿದ್ದರೆ ಇನ್ನು ಕೆಲವೆಡೆ ಆರಂಭವಾಗಬೇಕಾಗಿದೆ. ಒಟ್ಟಿನಲ್ಲಿ ಮೇ 19 ರ ವರೆಗೆ ರಾಜಕಾರಣಿಗಳ ಹೊಸ ಹೊಸ ಸುಳ್ಳುಗಳು, ಆಶ್ವಾಸನೆಗಳು ಕಾಮನ್ ಬಿಡಿ!

ಈ ವಾರದಲ್ಲಿ ಚುನಾವಣೆಯಲ್ಲಿ ಇಲ್ಲಿಯವರೆಗೆ ಯಾರೆಲ್ಲಾ ಎಷ್ಟು ಸುಳ್ಳು ಹೇಳಿದ್ದಾರೆ. ಯಾವ ಪಕ್ಷದಿಂದ ಯಾವ ಪಕ್ಷಕ್ಕೆ ಹಾರಿದ್ದಾರೆ. ಅದರೊಂದಿಗೆ ಎಷ್ಟು ಮಂದಿ ಚಲನಚಿತ್ರ ನಟರು, ಆಟಗಾರರು ಸಮಾಜ ಸೇವೆಯ ಮುಖವಾಡ ಹೊತ್ತು ದಿಢೀರ್ ರಾಜಕೀಯಕ್ಕೆ ಎಂಟ್ರಿ ಕೊಟಿದ್ದಾರೆ ಎಂಬ ವಿಚಾರಗಳ ಬಗ್ಗೆ ಒಂದು ರೌಂಡ್ ಆಪ್ ಇಲ್ಲಿದೆ.

1. ದೆಹಲಿಯ ಸಂಸದ ಉದೀತ್ ರಾಜ್ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಜಂಪ್ ಹೊಡೆದು ಟಿಕೆಟ್ ಸಿಗದ ಕಾರಣಕ್ಕಲ್ಲ ಅವರ ವಿಚಾರಗಳಿಂದ ಬೆಸೆತ್ತು ಬಿಜೆಪಿ ತೊರೆದಿದ್ದೇನೆ ಎಂದು “ಎಮೋಷನಲ್” ಹೇಳಿಕೆ ನೀಡಿದರು. ಇಂತಹ ರಾಜಕಾರಣಿಗಳು ಯಾವುದೇ ಸಿದ್ದಾಂತ ಅಥವಾ ಸೇವೆಗೆ ರಾಜಕೀಯಕ್ಕೆ ಬಂದಿರುವುದಿಲ್ಲ ಅವರ ಉದ್ದೇಶ “ಸ್ವಾರ್ಥ” ಅಷ್ಟೇ!

2.ಮತ್ತೊಂದು ಕಡೆ ಪ್ರಿಯಾಂಕ ಚತುರ್ವೇದಿ ಎಂಬ ಕಾಂಗ್ರೆಸ್ ಮುಖಂಡೆ ಶಿವಸೇನೆಗೆ ಸೇರುತ್ತಾರೆ. ಆಕೆಯ ಪ್ರಕಾರ ತನ್ನ ಮೇಲೆ ಕಾಂಗ್ರೆಸ್ ಪಕ್ಷದಲ್ಲಿರುವ ಹಲವಾರು ಮಂದಿಯಿಂದ ದೌರ್ಜನ್ಯವಾಗಿದೆಯೆಂಬುದು ಆರೋಪ. ಆದರೆ ವಾಸ್ತವಿಕತೆಯಲ್ಲಿ ಆಕೆಯ ಮಾತಿಗೆ ಅಲ್ಲಿ ಬೆಲೆ ನೀಡುವುದಿಲ್ಲವೆಂದು ಆ ಕಾರಣಕ್ಕಾಗಿ ಹೊರ ಬಂದಿರುವ ಬಗ್ಗೆ ಸಂದರ್ಶನವೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.

3.ಬಹು ಚರ್ಚಿತ ಮಾಲೆಂಗಾವ್ ಬಾಂಬ್ ಸ್ಪೋಟದ ಆರೋಪಿ ಮತ್ತು ಬಿಜೆಪಿಯ ಭೋಪಾಲ್ ಅಭ್ಯರ್ಥಿ ವಿಜ್ಞಾನದ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ!. ಇವರ ಪ್ರಕಾರ ನಿಮ್ಮ ಮನೆಯಲ್ಲಿ ದನ ಇದ್ದರೆ ಅದರ ಹಿಂದಿನಿಂದ ಮುಂದೆ ಬೆನ್ನು ಸವರಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ ಅಂತೆ, ಅದೇ ಸಂದರ್ಭದಲ್ಲಿ ಮುಂದಿನಿಂದ ಹಿಂದೆ ಸವರಿದರೆ ಈ ತಂತ್ರ ಫಸಲಿಸುವುದಿಲ್ಲವೆಂಬುದು ಅವರ ವಾದ!

ಇನ್ನು ಮುಂದುವರಿದು ಮತ್ತಷ್ಟು ಕಾಮಿಡಿ ಮಾಡಿರುವ ಪ್ರಗ್ಯಾ ಥಾಕೂರ್ ಗೋಮೂತ್ರ ಕುಡಿದು ಆಕೆಯ ಸ್ತನ ಕ್ಯಾನ್ಸರ್ ಗುಣವಾಯಿತು ಎಂದು ತಿಳಿಸಿದ್ದಾರೆ. ಹಾಗಾದರೆ ನಮಗೆ ಆಸ್ಪತ್ರೆಗಳು ಯಾಕೆ? ಕ್ಯಾನ್ಸರ್ ರೋಗಿಗಳೆಲ್ಲಾ ಗೋಶಾಲೆಗೆ ಹೋಗಿ ಗೋಮೂತ್ರ ಕುಡಿಯಬಹುದಲ್ವಾ?

ಈ ಬಗ್ಗೆ ನಮ್ಮ ದೇಶದ ಖ್ಯಾತ ವೈದ್ಯರು ಪ್ರತಿಕ್ರಿಯೆ ನೀಡಿದ್ದು (ಟಾಟಾ ಮೆಮೊರಿಯಲ್ ಸೆಂಟರ್) ಗೋಮೂತ್ರದಲ್ಲಿ ಕ್ಯಾನ್ಸರ್ ಗುಣವಾಗುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ “ಮುಂಬೈ ಮಿರರ್” ವರದಿಯ ಪ್ರಕಾರ ಆಕೆ 2010 ರಲ್ಲಿ ಕ್ಯಾನ್ಸರ್ ಬಗ್ಗೆ ಪರಿಶೀಲಿಸಲು ಹೋದಾಗ ಆಕೆಗೆ ಕ್ಯಾನ್ಸರ್ ಇಲ್ಲದಿರುವುದು ವೈದ್ಯಕೀಯ ವರದಿಗಳಲ್ಲಿ ದಾಖಲಾಗಿದೆ ಎಂದು ಪ್ರಕಟಿಸಿದೆ! ಇದರರ್ಥ ಸಾಧ್ವಿ ಪ್ರಗ್ಯಾ ಕ್ಯಾನ್ಸರ್ ಬಗ್ಗೆ ಸುಳ್ಳು ಹೇಳಿ ಜನರನ್ನು ವಂಚಿಸುತ್ತಿರುವುದು ಸ್ಪಷ್ಟ! ಒಂದು ವೇಳೆ ಆಕೆಗೆ ಕ್ಯಾನ್ಸರ್ ಇಲ್ಲ ಮತ್ತು ಯಾವುದೇ ಆರೋಗ್ಯ ಸಮಸ್ಯೆ ಇಲ್ಲವೆಂದಾದ ಮೇಲೆ ಆಕೆ ಜಾಮೀನಿನ ಮೇಲೆ ಹೊರಗೆ ಯಾಕಿದ್ದಾಳೆ?

4. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿಯೊಬ್ಬರು ರಾಜಕೀಯೇತರ ಸಂದರ್ಶನ ಕೊಡುತ್ತಾರೆಂದರೆ ನಂಬುತ್ತೀರಾ, ಹೌದು ಈ ವಾರದಲ್ಲಿ ಆ ಚಮತ್ಕಾರ ಕೂಡ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮೋದಿಯ ವರ್ಚಸ್ಸು ಹೆಚ್ಚಿಸಲು ನಟ ಅಕ್ಷಯ್ ಕುಮಾರ್ “ಸ್ಕ್ರಿಪ್ಟೆಡ್” ಇಂಟರ್ ವ್ಯೂವ್ ನಡೆಸಿದ್ದಾರೆ. ಈ ಇಂಟರ್ ವ್ಯೂ ನಲ್ಲಿ ಕಂಡ ಆಸಕ್ತಿದಾಯಕ ವಿಚಾರ ಅಂದ್ರೆ ಮಾನ್ಯ ಪ್ರಧಾನಿ ಮೋದಿಯವರು ತೊಳೆಯದೆ “ಮಾವಿನ ಹಣ್ಣು” ತಿಂದದ್ದು !

ಪಾಪ! ಮೋದಿಯವರು ಮುಖ್ಯಮಂತ್ರಿಯಾಗುವ ಮೊದಲು ತಮ್ಮ ಬಟ್ಟೆ ತಾವೇ ತೊಳೆದುಕೊಳ್ಳುತ್ತಿದ್ದರಂತೆ ಇದು ನಿಜವೇ? ಅಲ್ಲ ಶುದ್ಧ ಸುಳ್ಳು! ಯಾಕೆಂದರೆ ಇವರು 1970 ರಿಂದ ಮೋದಿಯ ಬಟ್ಟೆ ಮುಹಮ್ಮದ್ ಚಾಂದ್ ದೋಬಿ ತೊಳೆಯುತ್ತಿದ್ದ ಬಗ್ಗೆ 2017 ರಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಅಯ್ಯೋ ಸುಳ್ಳೆ!

ಆದರೆ ಈ ಸೊಕಾಲ್ಡ್ ರಾಜಕಿಯೇತರ ಸಂದರ್ಶನದ ಬಗ್ಗೆ ಎನ್ಡಿಟಿವಿ ಆ್ಯಂಕರ್ ರವೀಶ್ ಕುಮಾರ್ ನಡೆಸಿದ “Non political prime time” ಮೋದಿಗೆ ಬಿಗ್ ಟ್ರೋಲ್ ಮತ್ತು ಶಾಕ್ ಎರಡು ನೀಡಿತ್ತು!

5. ಈ ಚುನಾವಣೆಯಲ್ಲಿ ಮದ್ಯ, ನಗದು ಮತ್ತು ಮಾದಕ ದ್ರವ್ಯವನ್ನು ಮತದಾರರನ್ನು ಸೆಳೆಯಲು ವ್ಯಾಪಕವಾಗಿ ಬಳಸಲಾಗಿರುವುದು ಸ್ಪಷ್ಟ. ಈ ಬಾರಿ 2014ರ ಚುನಾವಣೆಗಿಂತ ಹೆಚ್ಚಿನ ದರದಲ್ಲಿ ಈ ಮೂರರ ಉಪಯೋಗ ಮಾಡಲಾಗಿದೆ. 2014 ರಲ್ಲಿ 172 ಮಿಲಿಯನ್ ಡಾಲರ್ ಹಣ ವಶಪಡಿಸಿಕೊಳ್ಳಲಾಗಿತ್ತು. ಆದರೆ ಇನ್ನು ಕೂಡ ಚುನಾವಣೆ ಮುಗಿದಿಲ್ಲ ಅಷ್ಟರ ಒಳಗಾಗಿಯೇ ಈ ಬಾರಿ ಅಧಿಕೃತವಾಗಿ ಇಸಿಐ ವೆಬ್ ಸೈಟ್ ಮಾಹಿತಿಯ ಪ್ರಕಾರ 449 ಮಿಲಿಯನ್ ಡಾಲರ್ ವಶಪಡಿಸಿಕೊಳ್ಳಲಾಗಿದೆ! ಕಳೆದ ಬಾರಿಗಿಂತ ನಾಲ್ಕು ಪಟ್ಟು ಈ ಬಾರಿ ಹೆಚ್ಚಾಗಿದೆ. ಹಾಗದರೆ ಡಿ ಮೊನಿಟೈಝೇಷನ್ ಎಫೆಕ್ಟ್ ಆಗಿದ್ದು ಯಾರಿಗೆ? ಹಾಗದರೆ ಈ ಕಪ್ಪು ಹಣ ಡಿಮೊನಿಟೈಝೆಷನ್ ಹೊರತಾಗಿ ಹೇಗೆ ಉಳಿದಿದೆ?

ಅದಲ್ಲೂ ಬೇರೆಲ್ಲಾ ಕಡೆ ನಗದು, ಚಿನ್ನ,ಮದ್ಯ ವಶ ಪಡಿಸಿಕೊಂಡರೆ ಗುಜರಾತಿನಲ್ಲಿ ಮಾತ್ರ ದೊಡ್ಡ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ!

6.ಚುನಾವಣಾ ಸಂದರ್ಭದಲ್ಲಿ ಸಿನಿಮಾದ ಪಿತೂರಿಗಳು ಜೋರಾಗಿ ಸದ್ದು ಮಾಡುತ್ತಿದೆ. ವಿವೇಕ್ ಒಬ್ರಾಯ್ ನಟಿಸಿರುವ ಪಿ.ಎಮ್ ಮೋದಿ ಚಲನಚಿತ್ರದ ನಂತರ ಇದೀಗ ಮಮತಾ ಬ್ಯಾನರ್ಜಿ ಜೀವನ ಚರಿತ್ರೆ ಆಧರಿತ ಭಾಗಿನಿ – ಬೆಂಗಲ್ ಟೈಗರ್ ಸಿನಿಮಾ ಬಂದಿದೆ. ಆದರೆ ಎರಡು ಸಿನಿಮಾಕ್ಕೂ ಚುನಾವಣಾ ಆಯೋಗ ಚುನಾವಣೆ ನಡೆಯುವ ವರೆಗೆ ಬ್ರೇಕ್ ನೀಡಿದೆ. ಪುಣ್ಯಕ್ಕೆ ಜನರನ್ನು ಇನ್ನಷ್ಟು ಮೂರ್ಖರನ್ನಾಗಿಸದಂತೆ ತಡೆದಂತಾಗಿದೆ!

7. ಬಾಬರಿ ಮಸೀದಿ ಧ್ವಂಸದ  ಬಗ್ಗೆ ಆಡಿರುವ ಪ್ರಗ್ಯಾ ಥಾಕೂರ್ ರ ವಿವಾದಾತ್ಮಕ ಹೇಳಿಕೆಯ ಮೇಲೆ ಇಸಿಐ ಪ್ರಕರಣ ದಾಖಲಿಸಿದೆ.

8. ಮೋದಿ ಮತ ಚಲಾಯಿಸಿದ ನಂತರ ತನ್ನ ಕೈಗೆ ಹಾಕಿದ ಶಾಹಿ ಗುರುತು ತೋರಿಸುತ್ತ ಚುನಾವಣಾ ನೀತಿ ಸಂಹೀತೆ ಉಲ್ಲಂಘಿಸಿ ರೋಡ್ ಶೋ ನಡೆಸಿದರು. ಆದರೆ ಇದುವರೆಗೆ ಇಸಿಐ ಮಾತ್ರ ಕೈಕಟ್ಟಿ ಕುಳಿತಿದೆ.

9.ಮೋದಿ ವೋಟ್ ಮಾಡುವ ಮುನ್ನ ತಾಯಿಯ ಬಳಿ ಹೋಗಿ ಆಶೀರ್ವಾದ ಪಡೆದರು.‌ಆದರೆ ಅವರು ಹೋಗುವಾಗ ಒಬ್ಬರು ಹೋಗಲಿಲ್ಲ. ಕ್ಯಾಮೆರಾ ಮ್ಯಾನ್ ಗಳೊಂದಿಗೆ ತನ್ನ ತಾಯಿಯನ್ನು ಭೇಟಿಯಾಗುವ ಪ್ರತಿ ಆ್ಯಂಗಲ್ ಫೋಟೊ ಕ್ಲಿಕ್ಕಿಸಿ ಪ್ರಚಾರ ಪಡೆಯಲಾಯಿತು! ಖಾಸಗಿ ಕ್ಷಣದಲ್ಲೂ ಎಚ್.ಡಿ ಕ್ಯಾಮೆರದಲ್ಲಿ ಹಲವಾರು ಭಂಗಿಗಳ ಪೋಟೊ!. ಹಾಗದರೆ ಮೋದಿ ಎಲ್ಲ ಮಾಡುವುದು ಪ್ರಚಾರಕ್ಕಾಗಿಯೇ? ತಾಯಿಯೊಂದಿಗಿರುವ ಖಾಸಗಿ ಕ್ಷಣದ ಪ್ರಚಾರ ಅಗತ್ಯವಿದೆಯೇ? ತಾಯಿ ಮಗನ ಸಂಬಂಧವನ್ನೂ ರಾಜಕೀಯದ ವಸ್ತು ವಿಷಯವಾಗಿ ಮೋದಿ ಬಳಸುತ್ತಿದ್ದಾರೆಯೇ?

10.ಕಳೆದ ವಾರದಲ್ಲಿ ಹಲವಾರು ಮಂದಿ ಚಿತ್ರ ನಟರು, ಕ್ರೀಡಾಳುಗಳು ರಾಜಕೀಯ ಪಕ್ಷಗಳಿಗೆ ಎಂಟ್ರಿಕೊಟ್ಟಿದ್ದಾರೆ.

ಬಾಲಿವುಡ್ ನಟ ಸನ್ನಿ ಡಿಯೋಲ್ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅಮಿಶಾ ಪಟೇಲ್ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಕ್ರಿಕೆಟಿಗ ಗೌತಮ್ ಗಂಭೀರ್ ಬಿಜೆಪಿ ಸೇರ್ಪಡೆ. ಬಾಕ್ಸರ್ ವಿಜೇಂದ್ರ ಸಿಂಗ್ ಕಾಂಗ್ರೆಸ್ ಸೇರ್ಪಡೆ. ಈ ಸೆಲೆಬ್ರಿಟಿಗಳು ನಿಮ್ಮ ವೋಟಿಗೆ ಅರ್ಹರೇ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯುತ್ತದೆ. ಯಾಕೆ ಅಂದ್ರೆ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲದ ಈ ಸೆಲೆಬ್ರಿಟಿಗಳು ಚುನಾವಣೆ ಹತ್ತಿರ ಬರುವಾಗ ಸೀಟಿಗಾಗಿ, ಸ್ವಾರ್ಥಕ್ಕಾಗಿ ಪಕ್ಷಗಳ ಮೆಟ್ಟಿಲು ಹತ್ತುವುದು. ಅದಕ್ಕಿಂತ ಮೊದಲು ಜನರೆಂದರೆ ಇವರಿಗೆ ಅನ್ಯ ಗ್ರಹ ಜೀವಿಗಳು! ಯಾರು ಚುನಾವಣೆಯ ಹೊಸ್ತಿಲಲ್ಲಿ ತಮ್ಮ ಲಾಭಕ್ಕಾಗಿ ರಾಜಕೀಯ ಪಕ್ಷಗಳಿಗೆ ಸೇರ್ಪಡೆ ಹೊಂದಿ ಚುನಾವಣೆಗೆ ಸ್ಪರ್ಧಿಸುತ್ತಾರೋ, ಅವರನ್ನು ನಾವು ನಂಬಲು ಬಾರದು, ವೋಟು ಮಾಡಬಾರದು. ನಮ್ಮ ರಕ್ಷಣಾ ಸಚಿವೆ ಸೀತರಾಮನ್ ಸನ್ನಿ ಡಿಯೋಲ್ “ಬಾರ್ಡರ್” ಸಿನಿಮಾದಲ್ಲಿ ರಾಷ್ಟ್ರೀಯತೆ ತೋರಿಸಿದ್ದಕ್ಕೆ ಬಿಜೆಪಿ ಸೇರ್ಪಡೆಯಂತೆ! ಹಾಗದರೆ ಅಂಬರೀಶ್ ಪುರಿ “ವಿಲನ್” ಪಾತ್ರ ಮಾಡಿದ್ದಕ್ಕೆ ಜೈಲಿಗೆ ಕಳುಹಿಸುವುದಾ? ವಿಕ್ಕಿ ಕೌಶಲ್ ಬಹಳಷ್ಟು ರಾಷ್ಟ್ರೀಯವಾದಿ ಸಿನಿಮಾ ಮಾಡಿದ್ದಕ್ಕೆ ಅವರನ್ನು ಪಿ.ಎಮ್ ಮಾಡುವುದಾ? ವಾಟ ಲಾಜಿಕ್ ಮೇಡಮ್ ಜಿ!

11.ಶಿವರಾಜ್ ಚೌಹಣ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಮಾಲೆಂಗಾವ್ ಸ್ಪೋಟದ ಆರೋಪಿ ಪ್ರಗ್ಯಾ ಮೇಲೆ ದೈಹಿಕ ಹಲ್ಲೆಯಾಗಿರುವ ಬಗ್ಗೆ ಹೇಳಿಕೆ ನೀಡಿದ್ದರು. ಆದರೆ ಇದೊಂದು ಸುಳ್ಳು ಹೇಳಿಕೆಯಾಗಿದ್ದು 2015 ರಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆ ನಡೆಸಿ ಆಕೆಯ ಮೇಲೆ ದೈಹಿಕ ಹಲ್ಲೆ ನಡೆದಿಲ್ಲವೆಂದು ಸ್ಪಷ್ಟ ಪಡಿಸಿದೆ.

 

12. ಮೋದಿ ಗುಜರಾತಿನ ರ಼್ಯಾಲಿ ಯೊಂದರಲ್ಲಿ ಕಾಂಗ್ರೆಸ್ ವಿರುದ್ಧ ಅವಹೇಳನಕಾರಿ ಮಾತು ಆಡಿದರು ಎಂಬ ವೀಡಿಯೋ ವೈರಲಾಗಿತ್ತು. ಇದು ಸಂಪೂರ್ಣ ಸುಳ್ಳಾಗಿದ್ದು “”Loko em kahe chhe bhavishya ma ladai pani ni thavain che, alya, badha kaho chho pani ladai thavain cheo toh pachi paani pela paal kem naa bandhiye” ಈ ರೀತಿಯಾಗಿ ಹೇಳಿದ್ದರು. ‌

13. ರಾಹುಲ್ ಗಾಂಧಿ ಸುಪ್ರೀಮ್ ಕೋರ್ಟ್ ನಲ್ಲಿ “ಚೌಕಿಧಾರ್ ಚೋರ್ ಹೈ” ಹೇಳಿದ್ದಕ್ಕೆ ಕ್ಷಮೆ ಕೇಳಿದರು ಎಂಬ ಸುಳ್ಳು ವೈರಲಾಯಿತು. ವಾಸ್ತವಿಕತೆಯಲ್ಲಿ “ಸುಪ್ರೀಮ್ ಕೋರ್ಟ್ ಚೌಕಿಧಾರ್ ಚೋರ್ ಹೈ” ಎಂಬ ಪದ ಬಳಕೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದರು. ರಾಹುಲ್ ಗಾಂಧಿ ಚೌಕಿಧಾರ್ ಚೋರ್ ಹೈ ಘೋಷಣೆ ಮುಂದುವರಿಸಿದ್ದಾರೆ!

14.ರಾಹುಲ್ ಗಾಂಧಿಯ “ಅಲುಸೆ ಸೋನಾ” “”ಉತ್ತರ ಪ್ರದೇಶದಲ್ಲಿ ಮಹಿಳೆಯರು ವರ್ಷಕ್ಕೆ 52 ಮಕ್ಕಳು ಹುಟ್ಟಿಸುತ್ತಾರೆ” ನಕಲಿ ವೀಡಿಯೋ ವೈರಲ್ ಮಾಡಲಾಯಿತು. ವಾಸ್ತವಿಕತೆಯಲ್ಲಿ ಇಡೀ ವೀಕ್ಷಿಸಿದಾಗ ರಾಹುಲ್ ಗಾಂಧಿ ಮೋದಿಯನ್ನು ಟೀಕಿಸುವಾಗ ಹಾಗೂ ಯೋಜನೆಗಳ ಅನುಷ್ಠಾನ ಪ್ರಶ್ನಿಸುವಾಗ ವಾಕ್ಯದ ಮಧ್ಯೆಯಲ್ಲಿ ಬಳಸಿದ ಪದಗಳಾಗಿತ್ತು!

ಈ ವಾರದಲ್ಲಿ ರಾಜಕೀಯ ವಲಯದಲ್ಲಿ ನಡೆದ ಸುಳ್ಳು, ಸ್ವಾರ್ಥ ರಾಜಕೀಯ, ಕಾಂಚಣದ ಕುರುಡು ನೃತ್ಯ, ಪರ ವಿರೋಧ ಚರ್ಚೆ ಸತ್ಯದ ಬೆಳಕಿನಲ್ಲಿ “ಕೊಸ್ಟಲ್ ಮಿರರ್” ನಿಮ್ಮ ಮುಂದಿಟ್ಟಿದೆ. ಮುಂದಿನ ವಾರ ಮತ್ತೆ ಹೊಸ ವಿಚಾರಗಳೊಂದಿಗೆ ಬರುತ್ತೇವೆ ಅಲ್ಲಿಯವರೆಗೆ “ಫೇಕು” ಗಳಿಂದ ದೂರವೇ ಇರಿ!

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.