ಭಟ್ಕಳ:ತಾಯಿ ಗದರುತ್ತಾರೆ ಎಂದು ಸಿಟ್ಟಿನಿಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವಳನ್ನು ಶ್ರುತಿ (19)ಎಂದು ಗುರುತಿಸಲಾಗಿದೆ.ಕಲಿಕೆಯಲ್ಲಿ ಹಿಂದಿದ್ದ ಶ್ರುತಿ ಗೆ ತಾಯಿ ಆಗಾಗ ಬೈದು ಬುದ್ದಿ ಹೇಳುತ್ತಿದ್ದರು.ಇದರಿಂದ ಶ್ರುತಿ ಮಾನಸಿಕವಾಗಿ ಬೇಸತ್ತಿದ್ದಳು ಎನ್ನಲಾಗಿದೆ.

ಸುಧೀಂದ್ರ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿಯಾದ 19 ವರ್ಷದ ಶ್ರುತಿ, ಬೈದೂಂರು ತಾಲೂಕಿನ ಆಳ್ವಗದ್ದೆ ನಿವಾಸಿಯಾಗಿದ್ದಾಳೆ. ಬುಧವಾರ ರಾತ್ರಿ ಚೆನ್ನಾಗಿ ಓದು ಎಂದು ತಾಯಿ ಗದರಿದ್ದಾರೆ. ಇದರಿಂದ ಮನನೊಂದು ಆಕೆ ಗುರುವಾರ ಬೆಳಿಗ್ಗೆ ಮನೆಯ ಪಕ್ಕಾಸಿಗೆ ಚೂಡಿದಾರದ ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.