ಶಿವಮೊಗ್ಗದ ಶಾಲಾ ಹಾಸ್ಟೆಲ್ ನಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

0
109

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಶಾಲೆಯೊಂದರ ಹಾಸ್ಟೆಲ್ ಸ್ಟೋರ್ ರೂಂನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಈಕೆ ನಗರದ ಮೇರಿ ಇಮ್ಯಾಕ್ಯುಲೇಟ್ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಕಾವ್ಯಾ (15) ಎಂದು ಗುರುತಿಸಲಾಗಿದೆ.

ಈಕೆ ಹಾಸ್ಟೆಲ್ ಸ್ಟೋರ್ ರೂಂನಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈಕೆಯ ತಂದೆ ತಾಯಿ ಶಿಕಾರಿಪುರದಲ್ಲಿ ವಾಸವಾಗಿದ್ದು, ನಾಲ್ಕನೇ ತರಗತಿಯಿಂದ ಕಾವ್ಯಾ ಈ ಶಾಲೆಯಲ್ಲಿ ಓದುತ್ತಿದ್ದಳು. ತಾಯಿ ಆಶಾ ಬಾಯಿ ಅಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಗಳನ್ನು ಓದಿಸುತ್ತಿದ್ದರು.

ಆತ್ಮಹತ್ಯೆ ಕುರಿತು ಕಾವ್ಯಾ ಪೋಷಕರು ಶಾಲೆಯ ಆಡಳಿತ ಮಂಡಳಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. 15 ದಿನದ ಹಿಂದೆ ಆಕೆಯ ಅಣ್ಣಂದಿರು ಬಂದು ಯೋಗ ಕ್ಷೇಮ ವಿಚಾರಿಸಿಕೊಂಡು ಹೋಗಿದ್ದಾರೆ. ಆಗ ಯಾವ ವಿಷಯವನ್ನೂ ಹಂಚಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುತ್ತಿದ್ದಾರೆ.

LEAVE A REPLY

Please enter your comment!
Please enter your name here