ಮಂಗಳೂರು: ಶ್ರೀ ಮತಿ ಶೆಟ್ಟಿ ಕೊಲೆ ಪ್ರಕರಣ ದಕ್ಷಿಣ ಕನ್ನಡದಲ್ಲಿ ಆತಂಕದ ವಾತಾವರಣ ಸೃಷ್ಟಿಸಿತ್ತು ಇದೀಗ ಕೊಲೆ ಮಾಡಿರುವ ಆರೋಪಿಗಳು ಪತ್ತೆಯಾಗಿದ್ದು ಅತ್ತಾವರದ ಗಂಡ ಮತ್ತು ಹೆಂಡತಿ ಸೇರಿಕೊಂಡು ಈ ಕೊಲೆ ನಡೆಸಿರುವುದಾಗಿ ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಜೋನ್ಸಾನ್ ಮತ್ತು ಶ್ರೀಮತಿ ಶೆಟ್ಟಿ ನಡುವೆ ವಾಗ್ವಾದ ನಡೆದು ಕೊಲೆಯಾಗಿದೆ. ನಂತರ ದೇಹವನ್ನು ಬಿಡಿ ಬಿಡಿಯಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ಹಾಕಿ ಬಿಸಾಡಿರುವ ಮಾಹಿತಿ ಲಭ್ಯವಾಗಿದೆ.

ಪತ್ತೆಯಾದ ಕಾಲು:

ಶ್ರೀಮತಿ ಶೆಟ್ಟಿಯ(35) ಬರ್ಬರ ವಾಗಿ ಕೊಲೆಗೈದು ತಲೆ ಹಾಗೂ ದೇಹದ ಭಾಗಗಳನ್ನು ಕತ್ತರಿಸಿ ವಿವಿಧೆಡೆ ಎಸೆದು ಪರಾರಿಯಾಗಿರುವ ಪೈಶಾಚಿಕವಾದ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮುಂದುವರಿದಿದ್ದು, ಬುಧವಾರ ಶ್ರೀಮತಿ ಶೆಟ್ಟಿಯ ಮೃತದೇಹದ ಉಳಿದ ಭಾಗಗಳಾದ ಕಾಲುಗಳು ಪತ್ತೆಯಾಗಿದೆ.

ನಂತೂರಿನ ಶ್ರೀನಿವಾಸ್ ಮಲ್ಯ ಪಾರ್ಕ್ ನ ಪಾದುವ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದು ತನಿಖೆ ಮುಂದುವರಿಸಿದ್ದಾರೆ.

ಮೇ.12ರಂದು ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಶ್ರೀಮತಿ ಶೆಟ್ಟಿಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ ಶವದ ಇತರ ದೇಹದ ಭಾಗಗಳು ಪತ್ತೆಯಾಗಿದ್ದವು. ಆದರೆ ಕಾಲಿನ ಭಾಗ ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ಮಹಿಳೆಯ ಕಾಲುಗಳ ಪತ್ತೆಗಾಗಿ ಮಂಗಳವಾರ ನಾಗುರಿಯ ಬಾವಿಯೊಂದರಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಪೌರ ಕಾರ್ಮಿಕರು ಬುಧವಾರ ಬೆಳಗ್ಗೆ ಸ್ವಚ್ಚಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾಗ ಮಹಿಳೆಯ ಕಾಲಿನ ಭಾಗ ನೋಡಿ ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇ.12ರಂದು ಮಹಿಳೆಯ ರುಂಡದ ಭಾಗದ ಪತ್ತೆಯಾದ ಅಣತಿ ದೂರದಲ್ಲಿ ಮಹಿಳೆಯ ಕಾಲಿನ ಭಾಗ ಪತ್ತೆಯಾಗಿದೆ.

ಹತ್ಯೆಗೊಳಗಾದ ಶ್ರೀ ಮತಿ ಶೆಟ್ಟಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.