ಪಕ್ಕಲಡ್ಕ : ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ ಇದರ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ “ಸ್ಪೋಟ್ಸ್ ಕ್ಲಬ್” ಇದರ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು. ಹೈಜಂಪ್ ವಿಭಾಗದ ಅಂತರಾಷ್ಟೀಯ ಮಟ್ಟದ ಆಟಗಾರ್ತಿ ಮತ್ತು ನಮ್ಮ ಮಂಗಳೂರಿನವರೇ ಆಗಿರುವ ಸಹನಾ ಕುಮಾರಿಯವರ ನಿವಾಸಕ್ಕೆ ಭೇಟಿಕೊಟ್ಟು ವಿಧ್ಯಾರ್ಥಿಗಳು ಸಮಾಲೋಚಿಸಿದರು. ನಂತರ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಂತರ ಮಾತನಾಡಿದ ಅವರು ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ವಿದ್ಯಾರ್ಥಿಗಳು ಸಾಧನೆಯ ಮೂಲಕ ರಾಜ್ಯಕ್ಕೆ ದೇಶಕ್ಕೆ ಕೊಡುಗೆ ನೀಡುವವರಾಗಬೇಕು. ಮೊದಲನೆಯದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸಮಯ್ಯಕ್ಕೆ ಸರಿಯಾಗಿ ಊಟಮಾಡಬೇಕು ಆತ್ಮ ವಿಶ್ವಾಸವನ್ನು ಬೆಳೆಸಬೇಕು ಎಂದರು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಯೂಸುಪ್ ಪಕ್ಕಲಡ್ಕ ದೈಹಿಕ ಶಿಕ್ಷಕಿ ರೋಹಿಣಿ ಅಧ್ಯಾಪಕರಾದ ಆಶಿರುದ್ದೀನ್ ಆಲಿಯಾ ಉಪಸ್ಥಿತರಿದ್ದರು.

Jpeg

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.