ಮಂಗಳೂರು : ಕಳೆದ 2018/19 ರ ಸಾಲಿನಲ್ಲಿ ವಿಧ್ಯಾರ್ಥಿ ವೇತನ ಕ್ಕಾಗಿ ಅರ್ಜಿ ಸಲ್ಲಿಸಿದ್ದ ವಿಧ್ಯಾರ್ಥಿ ವೇತನ ಇನ್ನೂ ಮಂಜೂರು ಮಾಡದೇ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವ ಕರ್ಣಾಟಕ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ತೊಂದರೆ ಅನುಭವಿಸುತ್ತಿರು ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು SKSSF ಕ್ಯಾಂಪಸ್ ವಿಂಗ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಫಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದರು. ನಿಯೋಗದಲ್ಲಿ SKSSF ಕ್ಯಾಂಪಸ್ ವಿಂಗ್ ದ.ಕ ಅಧ್ಯಕ್ಷರಾದ ತಮೀಮ್ ಸಿ.ಕೆ, ಉಪಾಧ್ಯಕ್ಷರಾದ ನೌಶಾದ್ ಅನ್ಸಾರಿ, ಕೋಓರ್ಡಿನೇಟರ್ ಅಡ್ವಕೇಟ್ ಬದ್ರುದ್ದೀನ್ ಕುಕ್ಕಾಜೆ, ಸದಸ್ಯರುಗಳಾದ ಇರ್ಫಾನ್ ಕಣ್ಣೂರು, ಅಶ್ಫಾಕ್ ಕಣ್ಣೂರು, SKSSF ಕ್ಯಾಂಪಸ್ ವಿಂಗ್ ಕರ್ನಾಟಕ ರಾಜ್ಯ ವರ್ಕಿಂಗ್ ಕಾರ್ಯದರ್ಶಿ ನೌಶಾದ್ ಮಲಾರ್, SKSSF ಟ್ರೆಂಡ್ ಕಾರ್ಯಕರ್ತರಾದ ಹಾಶಿಂ ತೋಡಾರ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.