ಪುಟ್ಟ‌ ಮಕ್ಕಳ ನಾಟಕದ ಮಾತುಗಳನ್ನು ಕೂಡಾ ಸಹಿಸಿಕೊಳ್ಳದೆ ಸೇಡಿಗೆ ಇಳಿದಿರುವ ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ – ಸಿದ್ದರಾಮಯ್ಯ

0
52

ಬೆಂಗಳೂರು :ವಿದ್ಯಾರ್ಥಿಗಳು ಅಭಿನಯಿಸಿದ್ದ ಸಣ್ಣ ನಾಟಕದಿಂದಾಗಿ ರಾಜದ್ರೋಹದ ಆರೋಪ ಎದುರಿಸುತ್ತಿರುವ ಬೀದರ್‌ನ ಶಾಹಿನ್ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆ ಮಾತನಾಡಿ ಧೈರ್ಯ ತುಂಬಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಕ್ಕಳ‌ ನಾಟಕದ ಕಾರಣದಿಂದಾಗಿ ರಾಜದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿನಿಯ ತಾಯಿ ನಜ್ಬುನ್ನಿಸಾ ಮತ್ತು ಶಿಕ್ಷಕಿ ಫರಿದಾ ಬೇಗಮ್ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. ಪುಟ್ಟ‌ ಮಕ್ಕಳ ನಾಟಕದ ಮಾತುಗಳನ್ನು ಕೂಡಾ ಸಹಿಸಿಕೊಳ್ಳದೆ ಸೇಡಿಗೆ ಇಳಿದಿರುವ ಬಿಜೆಪಿ ಸೈದ್ಧಾಂತಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ.

ಬೇಟಿ ಬಚಾವೋ‌ ಎಂದು ಕೂಗುತ್ತಾ ತಮ್ಮ ಬೆನ್ನನ್ನು ತಾವೆ ಚಪ್ಪರಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ‌ಯವರಿಗೆ ಬೀದರ್‌ನ‌ ಶಾಹಿನ್ ಶಾಲೆಯ ವಿದ್ಯಾರ್ಥಿನಿ ತನ್ನದಲ್ಲದ ತಪ್ಪಿಗೆ ತಾಯಿಯಿಂದ ದೂರವಾಗಿ ಮಾನಸಿಕ ಕ್ಷೋಭೆಗೊಳಗಾಗಿರುವುದು ಕಾಣ್ತಿಲ್ಲವೇ.ಎಂದು ಸಿದ್ದರಾಮಯ್ಯ ತಮ್ಮ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here