ಕುಂದಾಪುರ : ಮಗುವಿನ ನಾಪತ್ತೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.ಯಡಮೊಗೆ ಹೊಳೆಗೆ ತಾನು ಹಾರಿ ಆತ್ಯಹತ್ಯೆಗೆ ಯತ್ನಿಸುವ ಮೂಲಕ ತನ್ನ ಮಗುವಿನ ಸಾವಿಗೆ ಕಾರಣರಾದ ತಾಯಿ ರೇಖಾ ನಾಯ್ಕ್ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಇದೀಗ ಕೊಲೆ ಪ್ರಕರಣ ದಾಖಲಾಗಿದೆ.

ವಿಚಾರಣೆ ಸಂದರ್ಭ ರೇಖಾ ನಾಯ್ಕ್ ಗೆ ಮನೋವೈದ್ಯರಿಂದ ಆಪ್ತ ಸಮಾಲೋಚನೆ ನಡೆಸಿದ್ದು, ವೈದ್ಯರು ಆಕೆ ಮಾನಸಿಕ ಖಿನ್ನತೆಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಗಾಗಿ ಆಕೆಯನ್ನು ಇಂದು ಉಡುಪಿ ದೊಡ್ಡಣಗುಡ್ಡೆಯ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.

ರೇಖಾ ನೀಡಿದ ಹೇಳಿಕೆಯಂತೆ ಕಲಂ 302 (ಕೊಲೆ), ಕಲಂ 307 (ಕೊಲೆಯತ್ನ) ಹಾಗೂ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗಿದೆ.ಆತ್ಮಹತ್ಯೆ ಯತ್ನಕ್ಕೆ ಕಾರಣ ತಿಳಿದು ಬಂದಿಲ್ಲ.

ಈ ಪ್ರಕರಣದ ಸಮಗ್ರವಾದ ತನಿಖೆಯನ್ನು ರೇಖಾಳ ಚಿಕಿತ್ಸೆ ಮುಗಿಸಿ ಆಕೆ ಮಾನಸಿಕ ಖಿನ್ನತೆಯಿಂದ ಹೊರಬಂದು ಸಂಪೂರ್ಣ ಗುಣಮುಖರಾದ ಬಳಿಕವೇ ಮುಂದುವರಿಸಲಾಗುವುದು ಎಂದು ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.ರೇಖಾ ನಾಯ್ಕ್ ಗೆ ಆಸ್ಪತ್ರೆಗೆ ದಾಖಲಾಗಿ‌ ಚಿಕಿತ್ಸೆ ‌ನಡೆಯುತ್ತಿದೆ.

ಕೃಪೆ : ಪ್ರೈಮ್ ಟಿವಿ

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.