ಬಳ್ಳಾರಿ:ಬಳ್ಳಾರಿ ರಾಜಕೀಯ ಎಂದರೆ ತಕ್ಷಣ ನೆನಪಿಗೆ ಬರುತ್ತಿದ್ದದ್ದು ಬಿ. ಶ್ರೀರಾಮುಲು, ಜನಾರ್ದನ ರೆಡ್ಡಿ. ಈಗ ಕಾಲಚಕ್ರ ಒಂದು ಸುತ್ತು ತಿರುಗಿದೆ.ರೆಡ್ಡಿ ಬಳ್ಳಾರಿಯಲ್ಲಿಯೇ ಇಲ್ಲ, ಶ್ರೀರಾಮುಲು ಸಹ ಜಿಲ್ಲೆಯ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಬಿ. ಶ್ರೀರಾಮುಲು ಆರೋಗ್ಯ ಸಚಿವರು.2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಗೆದ್ದಿದ್ದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ. ನಿಧಾನವಾಗಿ ಅವರು ಬಳ್ಳಾರಿ ರಾಜಕೀಯದಿಂದ ದೂರು ಸರಿಯುತ್ತಿದ್ದಾರೆ.ಬುಧವಾರ ಕರ್ನಾಟಕ ಬಿಜೆಪಿ 15 ಕ್ಷೇತ್ರಗಳ ಉಪ ಚುನಾವಣೆಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿಯೂ ಚುನಾವಣೆ ನಡೆಯುತ್ತಿದೆ. ಆದರೆ, ಅದಕ್ಕೆ ಬಿ. ಶ್ರೀರಾಮುಲು ಉಸ್ತುವಾರಿಯಲ್ಲ.ಈ ಹಿನ್ನಲೆ ಶ್ರೀ ರಾಮುಲು ಜಿಲ್ಲೆಯ ರಾಜಕೀಯದಿಂದ ದೂರ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ.