ಉಡುಪಿ: ಉಡುಪಿ ಚಿಕ್ಕಮಗಳೂರು ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಆಸ್ತಿ‌ 2014 ರಲ್ಲಿ ಮೌಲ್ಯ 7 ಕೋಟಿಯ 20 ಲಕ್ಷದ 89 ಸಾವಿರದ 452 ರೂಪಾಯಿಗಳಿರುವುದಾಗಿ ಘೋಷಿಸಿಕೊಂಡಿದ್ದರು. ಇದೀಗ ಅವರ ಆಸ್ತಿ 10 ಕೋಟಿಯ 48 ಲಕ್ಷದ 72 ಸಾವಿರ.

ಚುನಾವಣೆ ಅಫದಾವಿತ್ ನಲ್ಲಿ ಘೋಷಿಸಿಕೊಂಡಂತೆ ಬ್ಯಾಂಕ್ ಬ್ಯಾಲೆನ್ಸ್, ಷೇರುಗಳಲ್ಲಿ ಹೂಡಿಕೆ, ಇನ್ಸೂರೆನ್ಸ್ ಪಾಲಿಸಿಗಳು, ವಾಹನಗಳು ಮತ್ತು ಚಿನ್ನ ಸೇರಿ 7 ಕೋಟಿಯ 38 ಲಕ್ಷದ 72 ಸಾವಿರದ 668 ರೂಪಾಯಿಗಳ ಆಸ್ತಿ ಮೌಲ್ಯವಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಲೋಕಸಭಾ ಸದಸ್ಯೆಯಾಗಿ ಮತ್ತು ಹೂಡಿಕೆ ಮಾಡಿರುವ ಹಣದಿಂದ ಆದಾಯದಲ್ಲಿ ಹೆಚ್ಚಳವಾಗಿರುವ ಬಗ್ಗೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇವರ ಮೇಲೆ ಮೂರು ಕ್ರಿಮಿನಲ್ ಪ್ರಕರಣಗಳಿವೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.