ಮುಷ್ಕರಕ್ಕೆ ಕರೆ ನೀಡಿದ್ದು ತುಕಡೆ ಗ್ಯಾಂಗ್ ಗಳು – ಶೋಭಾ ಕರಂದ್ಲಾಜೆ ಕ್ಷಮೆ ಕೇಳಬೇಕು : ಸಿಐಟಿಯು

0
78

ಜನವರಿ 8ರ ಮುಷ್ಕರವನ್ನು ಯಶಸ್ವಿ ಮಾಡಿದ ಎಲ್ಲಾ ಕಾರ್ಮಿಕರನ್ನು ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಭಿನಂದಿಸಿದೆ. ಭಾರತ್ ಬಂದ್ ವಿಫಲ ಎಂದು ಕೆಲವು ಮಾಧ್ಯಮಗಳು ಹೇಳಿದ್ದು, ಭಾರತ್ ಬಂದ್ ಗೆ ಯಾರೂ ಕರೆ ನೀಡಿರಲಿಲ್ಲ ಎಂಬುದನ್ನು ಗಮನಿಸಬೇಕು.
ದೇಶದ 10ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು 50ಕ್ಕು ಹೆಚ್ಚು ಸ್ವತಂತ್ರ ನೌಕರ ಸಂಘಗಳ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದ್ದವು. 200ಕ್ಕು ಹೆಚ್ಚು ರೈತ ಸಂಘಗಳು ತಮ್ಮ ಬೇಡಿಕೆಗಳಿಗಾಗಿ ಗ್ರಾಮೀಣ ಬಂದ್ ಗೆ ಕರೆ ನೀಡಿದ್ದವು. ರೈತ ಸಂಘಗಳು ಇರುವ ಕಡೆ ಗ್ರಾಮೀಣ ಬಂದ್ ನಡೆದಿದೆ.
ಹಾಗೆ ನೋಡಿದರೆ ಜನವರಿ 8ರ ಹೋರಾಟವು ದೇಶದ ಸಂಪತ್ತನ್ನು ಸೃಷ್ಟಿಸುವ ರೈತ – ಕಾರ್ಮಿಕರ ಅಪೂರ್ವ ಸಮ್ಮಿಲನ ಆಗಿದೆ.
ಅದೇನೇ ಇರಲಿ. ಜನರ ಅತ್ರಪ್ತಿಯನ್ನು ಗಮನಿಸಿ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಬದಲು ಸಂಸದ್ ಸದಸ್ಯೆ ಶೋಭಾ ಕರಂದ್ಲಾಜೆ ಅವರು ರೈತ ಮತ್ತು ಕಾರ್ಮಿಕರಿಗೆ ತುಕ್ಡೆ ಗ್ಯಾಂಗ್ ಎಂದು ಹೇಳುವ ಮೂಲಕ ದುಡಿಯುವ ಜನರಿಗೆ ಅವಮಾನ ಮಾಡಿದ್ದಾರೆ. ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಸಿಐಟಿಯು ಒತ್ತಾಯಿಸುತ್ತದೆ.
ನ್ಯಾಯವಾದ ಹೋರಾಟವನ್ನು ಕೋಮು ಭಾವನೆ ಕೆರಳಿಸಲು ಉಪಯೋಗಿಸುವ ಶೋಭಾ ಕರಂದ್ಲಾಜೆ, ಸುಳ್ಳು ಸುಳ್ಳು ಹೇಳಿಕೆ ನೀಡುವುದರಲ್ಲಿ ಪರಿಣಿತರು. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಕಾರ್ಮಿಕರ ವೇತನ ಹೆಚ್ಚಿಸಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಮೋದಿ ಸರಕಾರ ಕನಿಷ್ಟ ವೇತನ ರೂ. 4628 ಎಂದು ಘೋಷಿಸಿದೆ ಅಂದರೆ ದಿನಕ್ಕೆ ರು.178/- ಮಾತ್ರ. ಸೇವಕಿ ಎಂದು ಕರೆದು ಕೊಳ್ಳುವ ಶೋಭರವರ ದಿನದ ಭತ್ಯೆ ಎಷ್ಟು ಎಂದು ಹೇಳಬಹುದೇ? ಕೊಡಗು ಜಿಲ್ಲೆಯಲ್ಲಿ 168ಎಕರೆ ಜಮೀನು ಹೇಗೆ ಬಂತು ಎಂದು ತಿಳಿಸ ಬಹುದೇ?
ಸಂಸತ್ ಸದಸ್ಯೆ ಆಗಿ 5ವರ್ಷ 7 ತಿಂಗಳು ಕಳೆದರೂ ಕುಂದಾಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಶೋಭರವರು ರೈತ ಕಾರ್ಮಿಕರಿಗೆ ಅವಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಕ್ಷಮೆ ಯಾಚಿಸಿ ಎಂದು ಸಿಐಟಿಯು ಒತ್ತಾಯಿಸುತ್ತದೆ

LEAVE A REPLY

Please enter your comment!
Please enter your name here