ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಬಗ್ಗೆ ವ್ಯಾಪಕ ಕುತೂಹಲ ಮನೆ ಮಾಡಿತ್ತು. ಶೋಭಾ ಕರಂದ್ಲಾಜೆಗೆ ಪಕ್ಷದ ಒಳಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸೀಟು ಸಿಗುವ ಸಾಧ್ಯತೆಯ ಬಗ್ಗೆ ಕೂಡ ಚರ್ಚೆಯಾಗಿತ್ತು.‌

ಆದರೆ ಇದೀಗ ಬಿಜೆಪಿ ಕರ್ನಾಟಕದ 21 ಜನರ ಫೈನಲ್ ಲೀಸ್ಟ್ ಹೊರ ಹಾಕಿದ್ದು ಶೋಭಾ ಕರಂದ್ಲಾಜೆಗೆ ಸೀಟು ಅಂತಿಮವಾಗಿ ಘೋಷಣೆಯಾಗಿದೆ. ಆ ಪ್ರಯುಕ್ತ ಜಯಪ್ರಕಾಶ್ ಹೆಗ್ಡೆಯವರನ್ನು ಬಿಜೆಪಿ ಹೈಕಮಾಂಡ್ ತಿರಸ್ಕರಿಸಿದೆ.

ಇನ್ನೊಂದು ಕಡೆ ಪ್ರಮೋದ್ ಮಧ್ವರಾಜ್ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಂಬ ಸುದ್ದಿಯೂ ಇನ್ನಷ್ಟೇ ಸ್ಪಷ್ಟವಾಗಬೇಕಿತ್ತು. ಆದರೆ ಸಿದ್ಧರಾಮಯ್ಯ ಪಕ್ಷ ಬದಲಾಯಿಸದೇ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂಬ ಬುದ್ಧಿ ಮಾತು ಪ್ರಮೋದ್ ರನ್ನು ತಟಸ್ಥಗೊಳಿಸಿದ್ದಲ್ಲಿ, ಬಿಜೆಪಿಯ ರೆಬೆಲಾಗಿ ಜಯ ಪ್ರಕಾಶ್ ಹೆಗ್ಡೆ ಜೆಡಿಎಸ್ ನಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ.

ಮೂಲದ ಪ್ರಕಾರ ಕಾಂಗ್ರೆಸ್ ನ ಒಂದು ಬಣ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುವುದಕ್ಕಿಂದ ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸಲಿ ಎಂದು ಆಶಿಸುತ್ತಿರುವುದು ಕೂಡ ಕಂಡು ಬರುತ್ತಿದೆ. ಈತನ್ಮಧ್ಯೆ ಪ್ರಮೋದ್ ಮಧ್ವರಾಜ್ ಟಿಪ್ಪು ಸುಲ್ತಾನ್ ಬಗ್ಗೆ ಚರ್ಚ್ ಉದ್ಘಾಟನ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆ, ಬಿಜೆಪಿ ಸೇರ್ಪಡೆಯ ಬಗ್ಗೆ ಒಲವು ಹೀಗೆ ಎಲ್ಲವೂ ಅವರಿಗೆ ಹಿನ್ನಡೆಯಾಗಿ ಕಾಣುತ್ತಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.